ಇಂದು ಕನ್ನಡ ಭಾಷೆಯ ಬೆಳವಣಿಗೆ ಜಾಗತಿಕ ಓಟದ ವೇಗಕ್ಕೆ ಸಮನಾಗಿಲ್ಲ. ಹೀಗಿರುವಾಗ ನಮ್ಮ ಭಾಷೆಯನ್ನು ಉಳಿಸುವುದು-ಬೆಳೆಸುವುದು ಹೇಗೆ ಅನ್ನುವ ಅಳುಕು ಅನೇಕ ಕನ್ನಡಿಗರ ಮನಸ್ಸಿನಲ್ಲಿರುತ್ತದೆ. ಕನ್ನಡದ ಬೆಳವಣಿಗೆಯ ಸುತ್ತ ಕನ್ನಡಿಗರ ಮನಸ್ಸಿನಲ್ಲಿ ಇರುವ ಅಳುಕುಗಳು ದೂರವಾಗಬೇಕಾದರೆ ಅದು ಕನ್ನಡಿಗರ ಸರ್ವತೋಮುಖ ಏಳಿಗೆಯಿಂದ ಮಾತ್ರ ಸಾಧ್ಯ. ಹಾಗೆ ಕನ್ನಡಿಗರು ಏಳಿಗೆ ಹೊಂದಲು ಕಲಿಕೆ ಮತ್ತು ದುಡಿಮೆಗಳ ಪಾತ್ರ ಅತಿ ದೊಡ್ಡದಾಗಿರುತ್ತದೆ. ಪ್ರತಿಯೊಬ್ಬ ಕನ್ನಡಿಗನೂ ಏಳಿಗೆ ಹೊಂದುತ್ತಿದ್ದಂತೆ ಸಹಜವಾಗಿ ಕನ್ನಡವೂ ಬೆಳಗತೊಡಗುತ್ತದೆ ಮತ್ತು ಕನ್ನಡದ ಬಗ್ಗೆ ಮನಸಿನಲ್ಲಿನ ಅಳುಕು ದೂರವಾಗುತ್ತದೆ. ಈ ಕುರಿತು ಕನ್ನಡ ಪ್ರಭ ಪತ್ರಿಕೆಯಲ್ಲಿ ಮೂಡಿಬಂದ ಅಂಕಣ ಇಲ್ಲಿದೆ.