Tags » Bengaluru

Wilderfest: Bengaluru Vegan Festival - May 26 & 27, 2018

Wilderfest, happening this weekend, is focused on one value: to create more compassion for the animals, for our planet, and for us!

Dates: Saturday, May 26 and Sunday, May 27, 2018… 146 more words

Vegan Events In Bengaluru

How to become an Amateur Radio operator in India

Amateur radio is a technical hobby that is flourishing in India with the advent of low cost easy available hardware.

As of the statistics of 2018, close to 40,000 HAMs operate in India with their unique call signs. 421 more words

Bengaluru

Madness and the escapade: Nandi Hills

After having spent a few memorable hours with some of my closest friends, I chose to do the unusual. No sooner had I finished by Saturday morning brunch, I chose to tag along with a local resident of Bengaluru and explore a rather serene yet quite unusual corner of the city’s outskirts. 151 more words

Travel

ನಮ್ ಬೆಂಗಳೂರು ಕಥೆ - 2

ನಾವೆಲ್ಲಾ ನಮ್ಮ ಬಾಲ್ಯ ಹೀಗಿತ್ತು ಹಾಗಿತ್ತು ಅಂತ ಮೆಲುಕು ಹಾಕುವುದು ಸಹಜ. ಆದರೆ ಆ ನೆನಪುಗಳು ಇಪ್ಪತ್ತು – ಐವತ್ತು ವರ್ಷಗಳಿಗೆ ಸೀಮಿತವಾಗಿರುತ್ತದೆ. ನಮ್ಮ ಅಪ್ಪ-ಅಮ್ಮ ಅಥವಾ ಅಜ್ಜಿ-ತಾತಂದಿರ ಬಾಲ್ಯ, ಜೀವನ ಶೈಲಿ, ಆರ್ಥಿಕ ಪರಿಸ್ಥಿತಿ, ಆಗಿನ ಜನಜೀವನ, ಅವರ ಸಣ್ಣ ಪುಟ್ಟ ಖುಷಿಗಳು, ಆಗಿನ ಆಡಳಿತ, ಅವರ ಊರು, ಆಗಿನ ಹಾಡುಗಳು, ಕಥೆಗಳು, ಪರಸ್ಪರ ಸಂಬಂಧಗಳ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಎಲ್ಲೊ ಅವರು ಆಗೊಮ್ಮೆ ಈಗೊಮ್ಮೆ ಹೇಳುವ ಕಥೆಗಳ ಮೂಲಕ ನಮಗೆಲ್ಲಾ ಒಂದು ಪಕ್ಷಿನೋಟ ಇರಬಹುದು ಅಷ್ಟೇ. ಇತ್ತೀಚಿಗೆ ಕಥೆ ಹೇಳುವವರ ಸಂಖ್ಯೆ ಕಡಿಮೆ ಆಗಿದೆ, ಕಥೆ ಕೇಳೋರಿಗೂ ಆಸಕ್ತಿ ಇಲ್ಲದ ಹಾಗೆ ಆಗಿದೆ.

ಹಾಗೆ ನಾವು ಇರುವ ಊರು, ರಾಜ್ಯ, ದೇಶದ ಇತಿಹಾಸವು ನಮಗೆ (ಬಹುತೇಕರಿಗೆ) ಗೊತ್ತಿರಲ್ಲ. ಪಠ್ಯಪುಸ್ತಕದಲ್ಲಿ ಓದಿದ, ರಾಜ,-ರಾಣಿಯರ ಹೆಸರು, ಯುದ್ಧಗಳು, ತಾರೀಖುಗಳು ಬಿಟ್ರೆ, ನಮಗೆ ಇತಿಹಾಸದ ಪರಿಚಯವೇ ಹೆಚ್ಚಿಗೆ ಆಗಿರುವುದಿಲ್ಲ. ಶಾಲೆಯಲ್ಲಿ ಇತಿಹಾಸವನ್ನು ಹಾಗೆ ಕಂಠಪಾಠ ಮಾಡ್ಸಿದ ಕಾರಣದಿಂದಲೊ ಏನೋ ಬಹುತೇಕರಿಗೆ ಅದರ ಮೇಲೆ ಆಸಕ್ತಿಯೇ ಇಲ್ಲದಂಗೆ ಆಗಿದೆ.
ಇಷ್ಟಕ್ಕೂ, ಇತಿಹಾಸ ಯಾಕೆ ಓದಬೇಕು ಅಂತ ಕೇಳಿದ್ರೆ ನನ್ನ ಹತ್ರ ಉತ್ತರ ಇಲ್ಲ. ಕೆಲುವು ವರ್ಷಗಳ ಹಿಂದೆ ಇತಿಹಾಸ ತಿಳ್ಕೊಬೇಕು ಅನ್ನಿಸಿತು. ಹೀಗೆ ಏನೋ ಹುಡುಕುತ್ತಿದ್ದಾಗ ಸಿಕ್ಕಿದ್ದು ಬೆಂಗಳೂರಿನ ಬಗ್ಗೆ ಈ ಕಥೆ. ಸುಮಾರು ಇನ್ನೂರು ವರ್ಷ ಹಿಂದಿನ ಬೆಂಗಳೂರಿನ ಕಥೆ.

ಆಗಿನ ಕಾಲದ ಬೆಂಗಳೂರನ್ನು ಅರ್ಥ ಮಾಡ್ಕೊಳಕ್ಕೆ ನಮ್ಮ ಹತ್ರ ಇರೋ ಮುಖ್ಯ ದಾಖಲೆಗಳಂದ್ರೆ ಆಗಿನ ಕಾಲದ ಪತ್ರಗಳು ಹಾಗು ಪಾಶ್ಚಿಮಾಥ್ಯ ಪ್ರವಾಸಿಗಳು ಬರದಿರುವ ಪ್ರವಾಸ ಕಥನಗಳು. ಡಾಕ್ಟರ್ ಫ್ರಾನ್ಸಿಸ್ ಬುಕಾನನ್ ಒಬ್ಬ ಬ್ರಿಟಿಷ್ ಅಧಿಕಾರಿ ಹಾಗು ವೈದ್ಯ. ಆತ ಭಾರತವನ್ನು ಸುತ್ತಾಡಿ ತನ್ನ ಅನುಭವಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಅವರು ಬೆಂಗಳೂರಿಗೆ ಮೊದಲು ಬಂದಾಗ ಬೇಟಿ ಮಾಡಿದ್ದು ಸೈನಿಕರಾಗಿದ್ದ್ವವರ೦ತೆ. ಅವರಲ್ಲಿ ಅನೇಕರು ಸೈನ್ಯದಿಂದ ಹೊರಬಂದ ಮೇಲೆ ವ್ಯವಸಾಯ ಅಥವಾ ಸಣ್ಣ ಕೈ ಕೆಲಸಗಳನ್ನು ಮಾಡಿಕೊಂಡಿದ್ದರಂತೆ. ಸ್ವಲ್ಪ ಹಣವಿದ್ದವರು, ವ್ಯಾಪಾರಗಳನ್ನು ಆರಂಭಿಸಿದರಂತೆ. ಕೆಲವರು ಕುದುರೆ ಗಾಡಿಗಳನ್ನು ಇಟ್ಟುಕೊಂಡು ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳನ್ನು ಅಥವಾ ಸಾಮಾನುಗಳನ್ನು ಕೊಂಡೊಯ್ಯುವ ಕೆಲಸ ಆರಂಭಿಸಿದ್ರ೦ತೆ. ಕ್ರಮೇಣ ಜಟಕಾ ಗಾಡಿಗಳು ಬಸ್ ನಿಲ್ದಾಣಗಳಲ್ಲಿ ಬಳಕೆಗೆ ಬಂತು. ಹೀಗೆ ಬೆಂಗಳೂರಿನ ಜನಸಂಖ್ಯೆ ಜಾಸ್ತಿ ಆದ೦ಗೆ, ಜಟಕಾ ಗಾಡಿಗಳ ಸಂಖ್ಯೆಯೂ ಜಾಸ್ತಿ ಆಗಿರಬಹುದು. ಬಹುಶಃ ಇದು ಬೆಂಗಳೂರಿನ ಮೊದಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಬಹುದು.

ಬುಕಾನನ್ ಎರಡನೇ ಸಲ ಬೆಂಗಳೂರಿಗೆ ಬಂದಾಗ ಒಂದು ಮುಖ್ಯ ಬದಲಾವಣೆ ಕಂಡರಂತೆ. ಇದು ನಾವು ಈಗಿನ ಬೆಂಗಳೂರನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗಬಹುದು. ಅದೇ ತಾನೇ ಹಳ್ಳಿಗಳಿಂದ ಬೆಂಗಳೂರಿಗೆ ಜನ ವಲಸೆ ಬರುವುದನ್ನು ಗಮನಿಸಿದರಂತೆ. ಅವರು ಇಲ್ಲಿ ನೋಡಿದ ಮನೆಗಳನ್ನು ಹೀಗೆ ವಿವರಿಸುತ್ತಾರೆ.

“ಮನೆಯ ಮುಂಭಾಗದಲ್ಲಿ ಜಗಲಿ; ಪ್ರತಿ ಮನೆ ಮುಂದೆ ಸಗಣಿ ಹಾಕಿ ಸಾರಿಸಿ ಚಿತ್ರ ವಿಚಿತ್ರ ರೇಖಾ ಚಿತ್ರಗಳನ್ನು (ರಂಗೋಲಿ) ಬರೆಯುತ್ತಾರೆ. ಎಲ್ಲಾ ಮನೆ ಮುಂಬಾಗಿಲಲ್ಲಿ ಮಾವಿನ ತೋರಣ. ಹೆಂಗಸರು ಮನೆ ಕೆಲಸ ಮಾಡುತ್ತಿರುವುದು, ಅಥವಾ ನೀರು ತರಲು ಕೆರೆಗೆ ಹೋಗುವುದು ಸಾಮಾನ್ಯವಾಗಿ ಕಾಣುತ್ತಿತ್ತು.”

ಬೆಂಗಳೂರಿನಲ್ಲಿ ನಡಿಯುತ್ತಿದ್ದ ವ್ಯಾಪಾರಗಳ ಬಗ್ಗೆ ಹೀಗೆ ವಿವರಿಸಿದ್ದಾರೆ.
ಆಗಿನ ಕಾಲದಲ್ಲಿ ಅಗರ ಹಳ್ಳಿ ದಿನಸಿ ವ್ಯಾಪಾರ ಕೇಂದ್ರವಾಗಿತ್ತಂತೆ. ಇಲ್ಲಿಗೆ ದೊಡ್ಡ ದೊಡ್ಡ ದಿನಸಿ ವ್ಯಾಪಾರಿಗಳು ರೈತರೊಡನೆ ವ್ಯಾಪಾರ ಮಾಡಲು, ಸುತ್ತ ಮುತ್ತ ಊರುಗಳಾದ ಬೇಗೂರು, ಹಲಸೂರು, ಹೆಸರಘಟ್ಟ, ವರ್ತೂರುಗಳಿಂದ ಬಂದು ವ್ಯಾಪಾರ ಮಾಡಿ ಹೋಗುತತ್ತಿದ್ದರಂತೆ. ಕಾಡುಗೋಡಿ, ಈಗಿನ ವೈಟಫೀಲ್ಡ್ಅಲ್ಲಿ ಸುಣ್ಣ ತಯಾರಿಸುವುದು ಮುಖ್ಯ ಕಸುಬಾಗಿತ್ತ೦ತೆ. ಸುಣ್ಣಕ್ಕೆ ಬೇಕಾಗುವ ಕಲ್ಲನ್ನು ಅಲ್ಲೇ ಅಗೆದು ತೆಗೆದು, ತಯಾರಿಸಿ ವ್ಯಾಪಾರ ಮಾಡುತ್ತಿದ್ದರಂತೆ. ಇದೆಲ್ಲಾ ಸುತ್ತ ಮುತ್ತ ಊರುಗಳಾಗಿದ್ದವು ಅಂದ್ರೆ ಈಗ ಆಶ್ಚರ್ಯ ಆಗತ್ತೆ. ಬುಕಾನನ್ ಈಗ ಏನಾದರೂ ಈ ಜಾಗಗಳಿಗೆ ಭೇಟಿ ನೀಡಿದರೆ ಎರಡೇ ಅಕ್ಷರಗಳಲ್ಲಿ ಅವನ ಅನುಭವವನ್ನು ತಿಳಿಸಬಹುದು–ಟ್ರಾಫಿಕ್ ಹಾಗು ಧೂಳು.
ಬೆಂಗಳೂರು ಮುಂದೆ ಉತ್ತಮ ವ್ಯಾಪಾರ ಕೇಂದ್ರ ಆಗುವುದರಲ್ಲಿ ಅನುಮಾನವೇ ಇಲ್ಲ ಅಂತ ಬಹಳಷ್ಟು ಜನ ಹೇಳ್ತಿದ್ರಂತೆ. ಅವರ ದೂರ ದೃಷ್ಟಿ ನಿಜವಾಗ್ಲೂ ಮೆಚ್ಚ ಬೇಕಾದ್ದೇ.

ಇತಿಹಾಸ

Road trip to Dandeli and Karwar

The city life can get so monotonous at times that you wait for those long weekends to escape from it! One such chance I got was April end, 28th and 29th is weekend holiday and May 1st being mandatory holiday. 1,194 more words

Roam