Tags » Bharathanatyam

Gurudakshina

5th September, 2009.
A.D.A Rangamandira, J.C Road

Around 5:30 PM, I was waiting backstage for my Guru, Dr. B V Geetha. I rarely go on stage without giving her my… 612 more words

Throwback

Rhadha—Keeping the Dance Tradition Alive

This article was written a few years ago as a cover story for Eves Touch!! Her disciples are celebrating her 75th birthday.

Celebrations of Rhadha… 1,577 more words

Society

Dance- a way of cure. 

Usually, the stories that speak out through a dancer’s eye is a story that is kept as a until chapter of her life. Dance cures people in almost every way. 279 more words

ಬಾಲ

ಟಿ ಎಸ್ ವೇಣುಗೋಪಾಲ್,
ಶೈಲಜ

ಪುರಂದರದಾಸರ ಕೃಷ್ಣ ನೀ ಬೇಗನೇ ಬಾರೋ ಕೃತಿಯನ್ನು ಕೇಳದವರ‍್ಯಾರು? ಆದರೆ ಬಾಲಸರಸ್ವತಿಯ ನೃತ್ಯದಲ್ಲಿ ಅದರ ಸ್ವಾರಸ್ಯವೇ ಬೇರೆ. ಚಿಕ್ಕಂದಿನಿಂದಲೇ ಬಾಲಸರಸ್ವತಿಗೂ ಕೃಷ್ಣನಿಗೂ ತುಂಬಾ ಹತ್ತಿರದ ನಂಟು. ಇವರು ವಾಸವಾಗಿದ್ದ ಮನೆಯ ಕೆಳಗೆ ಆ ಮನೆಯ ಒಡತಿ ಕಾಮಕೋಟಿ ಅಮ್ಮಾಳ್ ವಾಸವಿದ್ದರು. ಅವರ ಮನೆಯಲ್ಲಿ ಎಲ್ಲೆಲ್ಲೂ ಕೃಷ್ಣನ ಚಿತ್ರಗಳೇ. ಕಾಮಕೋಟಿ ಅಮ್ಮಾಳ್ ಮನೆಯಲ್ಲಿ ಪ್ರತಿದಿನ ಕೃಷ್ಣನನ್ನು ಎಬ್ಬಿಸುವ ಕೆಲಸ ಎಳೆಯ ಬಾಲಾಳದ್ದು. ಸೂರ್ಯ ಹುಟ್ಟುವುದು ತಪ್ಪಬಹುದಿತ್ತು. ಬಾಲಕುಟ್ಟಿ ಕೃಷ್ಣನನ್ನು ಹಾಡಿಕೊಂಡು ನರ್ತಿಸುತ್ತಾ ಎಬ್ಬಿಸುವುದು ತಪ್ಪುತ್ತಿರಲಿಲ್ಲ.
ಎಳವೆಯಲ್ಲೇ ವಿಭಿನ್ನವಾದ ಭಾವನೆಗಳನ್ನು ತುಂಬಾ ಸೂಕ್ಷ್ಮವಾಗಿ ಅಭಿವ್ಯಕ್ತಿಸುವುದು ಅವರಿಗೆ ಸಾಧ್ಯವಾಗಿತ್ತು. ಅವರ ಕಲ್ಪನೆಗಳು ಅಪರಿಮಿತ. ನೃತ್ಯದ ಶಾಸ್ತ್ರೀಯ ಭಾಷೆಯನ್ನು ಬಲು ಸೂಕ್ಷ್ಮವಾಗಿ ಬಳಸುತ್ತಿದ್ದರು. ಅವರ ಅಭಿನಯ ಪರಿಶುದ್ಧವಾಗಿ ದಿವ್ಯವಾಗಿತ್ತು. ಅದು ಬರಿಯ ಜ್ಞಾನವಷ್ಟೇ ಆಗಿರಲಿಲ್ಲ. ತಂತ್ರ ಹಾಗೂ ಅವುಗಳ ಪ್ರಜ್ಞಾಪೂರ್ವಕ ಬಳಕೆಯನ್ನು ಮೀರಿದ್ದಾಗಿತ್ತು. ನರ್ತಿಸುವ ಹೊತ್ತಿನಲ್ಲಿ ಅವರು ಕೇವಲ ನರ್ತಕಿಯಾಗಷ್ಟೇ ಉಳಿಯುತ್ತಿರಲಿಲ್ಲ. ಅಭಿನಯಿಸುತ್ತಿರುವ ಪಾತ್ರವೇ ತಾವಾಗಿಬಿಡುತ್ತಿದ್ದರು. ಭಾವ ಎನ್ನುವುದು ಅವರ ಅಂತರಂಗದ ಒಳಗಿನಿಂದ ಹೊರಹೊಮ್ಮುತ್ತಿತ್ತು.
ಬಾಲಾ ಪ್ರಖ್ಯಾತ ವೀಣಾ ಧನಮ್ಮಾಳ್ ಅವರ ಉತ್ಕೃಷ್ಟ ಕಲಾ ಪರಂಪರೆಯ ಕುಡಿ. ಧನಮ್ಮಾಳ್ ಅವರ ಅಜ್ಜಿ ಕಾಮಾಕ್ಷಿ ೧೯ನೇ ಶತಮಾನದಲ್ಲಿ ತಂಜಾವೂರು ಆಸ್ಥಾನದ ರಾಜನರ್ತಕಿ. ಅಮೂಲ್ಯವಾದ ಕಲಾಪರಂಪರೆಯೊಂದನ್ನು ಸುಮಾರು ಆರು ತಲೆಮಾರುಗಳು ಜತನವಾಗಿ ಕಾಪಾಡಿಕೊಂಡು ಬಂದು, ಅದನ್ನು ಮುಂದಕ್ಕೂ ಕೊಂಡೊಯ್ದ ಅಪರೂಪದ ಪರಂಪರೆ ಅವರದ್ದು.
ಬಾಲಾ ಅವರ ಗುರು ಕಂಡಪ್ಪ ಪಿಳ್ಳೈ ಅವರು ಕೂಡ ಅಂತಹುದೇ ಒಂದು ಪರಂಪರೆಗೆ ಸೇರಿದವರು. ಅವರದ್ದು ಕೂಡ ಆರು ತಲೆಮಾರುಗಳು ಕಲೆಯನ್ನು ಸಲುಹಿದ ಕುಟುಂಬ. ಪ್ರಖ್ಯಾತ ನಟ್ಟುವನಾರ್‌ಗಳನ್ನು ಕೊಡುಗೆ ನೀಡಿದ ಕುಟುಂಬ ಅದು. ಆ ಕಾಲದ ನಟ್ಟುವನಾರುಗಳು ಕೇವಲ ನೃತ್ಯ ಹೇಳಿ ಕೊಡುತ್ತಿದ್ದ ಒಳ್ಳೆಯ ಗುರುಗಳಷ್ಟೇ ಆಗಿರಲಿಲ್ಲ. ಅವರು ಸ್ವತಃ ಸಂಗೀತ ಹಾಗೂ ನೃತ್ಯದ ಉತ್ಕೃಷ್ಟ ಕಲಾವಿದರಾಗಿದ್ದರು.
ಈ ಎರಡು ಕಲಾಧಾರೆಗಳ iಹಾ ಸಂಗಮವಾಗಿದ್ದರು ಬಾಲಾ. ಕೇವಲ ಬಾಲಾ ಮಾತ್ರವಲ್ಲ, ಆ ಕುಟುಂಬಕ್ಕೆ ಸೇರಿದವರೆಲ್ಲರೂ ಖ್ಯಾತರೆ! ಮಹಾನ್ ಸಂಗೀತ ಪರಂಪರೆಯ ಕುಟುಂಬದಿಂದ ಬಂದಿದ್ದ ಅವರಿಗೆ ಸಂಗೀತ ಒಲಿದಿತ್ತು. ಅವರ‍್ಯಾರೂ ನೃತ್ಯವನ್ನು ಕೇವಲ ಮುದ್ರೆಗಳೆಂದು ಭಾವಿಸಿರಲಿಲ್ಲ ಅವರದನ್ನು ಕಾವ್ಯವೆಂದೇ ಭಾವಿಸಿದ್ದರು. ನೃತ್ಯ ಕಲಾವಿದರು ಸಂಗೀತಗಾರರೂ ಆಗಿದ್ದರಷ್ಟೇ ಒಳ್ಳೆಯ ನೃತ್ಯಪಟುಗಳಾಗುವುದಕ್ಕೆ ಸಾಧ್ಯ. ನನಗಿದನ್ನು ಚಿಕ್ಕವಯಸ್ಸಿನಿಂದಲೇ ನನ್ನಮ್ಮ ಮನದಟ್ಟು ಮಾಡಿದ್ದಳು. ಎನ್ನುತ್ತಿದ್ದರು ಬಾಲ.
ಪುಟ್ಟ ಮಗುವಿದ್ದಾಗಲೇ ಅಮ್ಮ ಜಯಮ್ಮ ಬಾಲಾಗೆ ಸಂಗೀತದ ಸೂಕ್ಷ್ಮಗಳನ್ನು ಕಲಿಸಿದ್ದರು. ತೊದಲ್ನುಡಿ ಗಳಾಡುವ ಮೊದಲೇ ಬಾಲಾಗೆ ಸಂಗೀತದ ಭಾಷೆ ಅರ್ಥವಾಗತೊಡಗಿತ್ತು. ಬಾಲಾಗೆ ನೃತ್ಯಕ್ಕೆ ನಿಜವಾದ ಪ್ರೇರಣೆ ಮೈಲಾಪುರ ಗೌರಿಅಮ್ಮಾಳ್. ಗೌರಿ ಅಮ್ಮಾಳರ ನೃತ್ಯಕ್ಕೆ ಜಯಮ್ಮಾಳ್ ಮತ್ತು ಅವರ ಅಕ್ಕ ಲಕ್ಷ್ಮೀರತ್ನಂ ಪದಂಗಳನ್ನು ಹಾಡುತ್ತಿದ್ದರು. ಹೆಂಗಸರು ನೃತ್ಯಕ್ಕೆ ಪದಂಗಳನ್ನು ಹಾಡುವ ಪರಿಪಾಠ ಪ್ರಾರಂಭವಾದದ್ದೇ ಇಲ್ಲಿಂದ. ಬಾಲಾಗೆ ಗೌರಿಅಮ್ಮಾಳ್ ನೃತ್ಯ ಕಂಡರೆ ವಿಚಿತ್ರವಾದ ಹುಚ್ಚು.
ನನಗೆ ನೃತ್ಯಕ್ಕೆ ಮೂಲ ಪ್ರೇರಣೆ ದೊರಕಿದ್ದು ಮೈಲಾಪುರ ಗೌರಿ ಅಮ್ಮಾಳ್ ಅವರ ಕಾರ್ಯಕ್ರಮ ನೋಡಿದಾಗ. ನಾನಾಗ ತುಂಬಾ ಚಿಕ್ಕವಳು. ಅವರು ನೃತ್ಯವನ್ನು ಆ ಹಂತಕ್ಕೆ ಬೆಳೆಸಿಲ್ಲದೇ ಹೋಗಿದ್ದಲ್ಲಿ ನಾನು ಪ್ರಯತ್ನಿಸುತ್ತಿದ್ದ ಸಂಗೀತ ಹಾಗೂ ನೃತ್ಯದ ಸಮನ್ವಯ ಬಹುಶಃ ಸಾಧ್ಯವೇ ಆಗುತ್ತಿರಲಿಲ್ಲ. ಎಂದು ಸ್ವತಃ ಬಾಲಾ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ.
ಬಾಲಾ ಗೌರಿಯಮ್ಮಾಳ ಹಾಗೇ ಜೆಂತಿ ಸೀರೆ ಉಟ್ಟುಕೊಂಡು ಅವರ ಹಾಗೆಯೇ ಆಭರಣಗಳನ್ನು ತೊಟ್ಟು, ಅವರಂತೆಯೇ ನರ್ತಿಸಲು ಯತ್ನಿಸುತ್ತಿದ್ದರು. ಮನೆಯವರಿಂದ ಬಯ್ಗಳ, ಕೆಲವೊಮ್ಮೆ ಹೊಡೆತವೂ ಬೀಳುತ್ತಿತ್ತು. ಆದರೆ ಬಾಲ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಗೌರಿಯಮ್ಮ ಇದನ್ನೆಲ್ಲಾ ಗಮನಿಸುತ್ತಿದ್ದರು. ಬಾಲಾಗೆ ನೃತ್ಯ ಕಲಿಸುವುದು ಒಳ್ಳೆಯದು ಎಂದು ಜಯಮ್ಮಾಳಿಗೆ ಸಲಹೆ ನೀಡಿದರು. ಆದರೆ ಧನಮ್ಮಾಳ್ ಏನನ್ನುತ್ತಾರೋ ಎಂಬ ಭಯದಿಂದ ಜಯಮ್ಮಾಳ್ ಬೇಡ ಎಂದು ಕ್ಷಣಕ್ಕೆ ಹೇಳಿದರೂ, ನಂತರ ಒಂದು ದಿನ ಧೈರ್ಯ ಮಾಡಿ ಈ ಕುರಿತು ಧನಮ್ಮಾಳರನ್ನು ಕೇಳಿದರು. ಆದರೆ ಕಡ್ಡಿ ಮುರಿದಂತೆ ಬೇಡ ಎಂದು ಧನಮ್ಮಾಳ್ ಮಾತು ಮುಗಿಸಿದರು. ಗೌರಿ ಅಮ್ಮಾಳ್ ಮತ್ತು ಕಂಡಪ್ಪ ಪಿಳ್ಳೈ ಕೇಳಿದಾಗಲೂ ಅವರ ಉತ್ತರ ಇದೇ ಆಗಿತ್ತು. ನಾಚ್ ವಿರೋಧಿ ಚಳುವಳಿ ಆಗಿನ್ನೂ ತೀವ್ರಗೊಂಡಿರಲಿಲ್ಲ. ಅದರೂ ಹೆಚ್ಚಿನ ದೇವದಾಸಿಯರು ಬದಲಾಗುತ್ತಿದ್ದ ಕಾಲದ ಬಗ್ಗೆ ತುಂಬಾ ಕಳವಳಗೊಂಡಿದ್ದರು. ಧನಮ್ಮಾಳ್ ಮನೆಯಲ್ಲಿ ಧನಮ್ಮಾಳ ಒಪ್ಪಿಗೆಯಿಲ್ಲದೆ ಒಂದು ಸಾಸುವೆಯೂ ಸಿಡಿಯುತ್ತಿರಲಿಲ್ಲ. ಏಕೆಂದರೆ ಅವರು ಸಂಗೀತ ಮತ್ತು ಕಲಾಪೋಷಣೆಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಕಾರ್ಯ ಕ್ರಮ ಮತ್ತು ಹಣಕ್ಕೆ ಸಂಬಂಧಿಸಿದಂತೆಯೂ ಎಲ್ಲವನ್ನೂ ನಿಯಂತ್ರಿಸುತ್ತಿದ್ದ ನಿಜವಾದ ಅಪ್ಪಟ ದೇವದಾಸಿ ಅಮ್ಮನಾಗಿದ್ದರು.
ಆ ಹೊತ್ತಿಗೆ ಧನಮ್ಮಾಳ್‌ಗೆ ಕಣ್ಣು ತುಂಬಾ ಮಂಜಾಗಿ ಏನೂ ಕಾಣುತ್ತಿರಲಿಲ್ಲ. ಆದರೂ ಒಂದು ದಿನ ಬಾಲಾ ನೋಡುವುದಕ್ಕೆ ಹೇಗಿದ್ದಾಳೆ, ಮಗಳಿಗೆ ಮೆಳ್ಳಗಣ್ಣಾ? ಎಂದು ಜಯಮ್ಮಳನ್ನು ವಿಚಾರಿಸಿಕೊಂಡರು. ಅದಕ್ಕೆ ಜಯಮ್ಮಾಳ್ ಇಲ್ಲ ಎಂದಾಗ ಹಲ್ಲುಗಳು ಅಂದವಾಗಿವೆಯೇ, ನೋಡುವುದಕ್ಕೆ ಚೆನ್ನಾಗಿದ್ದಾಳೆಯೇ ಎಂದು ಕೇಳಿದರು. ಅದಕ್ಕೆ ಜಯಮ್ಮ ಹಲ್ಲುಗಳು ಚೆನ್ನಾಗಿವೆ, ಮತ್ತು ನೋಡುವುದಕ್ಕೆ ತುಂಬಾ ಸುಂದರವಲ್ಲದಿದ್ದರೂ ಲಕ್ಷಣವಾಗಿದ್ದಾಳೆ ಎಂದರು. ಹಾಡುವುದಕ್ಕೆ ಬರುತ್ತದಾ ಎಂದು ಕೇಳಿ, ಹಾಡಿ ತೋರಿಸು ಎಂದಾಗ ಬಾಲಾ ಹಾಡಿ ತೋರಿಸಿ ಸೈ ಎನಿಸಿಕೊಂಡ ಮೇಲಷ್ಟೇ ನೃತ್ಯ ಕಲಿಯಲು ಅಜ್ಜಿಯ ಒಪ್ಪಿಗೆ ದೊರೆತದ್ದು.
ಆ ಕಾಲವನ್ನು ನೆನಪಿಸಿಕೊಳ್ಳುತ್ತಾ ಬಾಲಾ ಒಂದೆಡೆ ಹೇಳಿಕೊಂಡಿದ್ದಾರೆ:
ನನ್ನ ಅಜ್ಜಿಗೆ ನಾನು ನೃತ್ಯ ಕಲಿಯುವುದು ಇಷ್ಟವಿರಲಿಲ್ಲ. ನೃತ್ಯ ಕಲಿತರೆ ನಾನು ಸಂಗೀತದಲ್ಲಿ ಆಸಕ್ತಿ ಕಳೆದುಕೊಳ್ಳಬಹುದೆನ್ನುವ ಗಾಬರಿ ಅವರಿಗಿತ್ತು ಎಂಬುದು ನನ್ನ ಊಹೆ. ನಾನು ನೃತ್ಯ ಕಲಿಯುವುದಕ್ಕೆ ನಮ್ಮ ಕುಟುಂಬದೊಳಗೆ ತುಂಬಾ ವಿರೋಧವಿತ್ತು. ಆದರೆ ನಮ್ಮಮ್ಮ ನನಗೆ ನೃತ್ಯ ಕಲಿಸುವ ನಿರ್ಧಾರ ತೆಗೆದುಕೊಂಡರು. ನಮ್ಮಮ್ಮನ ನಿರ್ಧಾರವನ್ನು ಮಹಾನ್ ಗಾಯಕ ಅರಿಯಾಕುಡಿ ರಾಮಾನುಜ ಅಯ್ಯಂಗಾರ‍್ಯರು ಬೆಂಬಲಿಸಿದರು. ಸಾಮಾನ್ಯವಾಗಿ ಎಲ್ಲಾ ಕುಟುಂಬಗಳೂ ನೃತ್ಯವನ್ನು ವಿರೋಧಿಸುತ್ತಿದ್ದ ಕಾಲ ಅದು. ಎಲ್ಲರೂ ಮಾತನಾಡುತ್ತಿದ್ದದ್ದು ಸಂಗೀತದ ಪ್ರಾಮುಖ್ಯ ಕುರಿತೇ.
ನನಗೆ ಪಾಠ ಹೇಳಿಕೊಡಲು ಕಂಡಪ್ಪ ಪಿಳ್ಳೈ ಅವರನ್ನು ಆಯ್ಕೆಮಾಡಿ ಕೊಂಡರು. ಅವರು ತುಂಬಾ ಒಳ್ಳೆಯ ಸಂಗೀತಗಾರರೂ ಆಗಿದ್ದರು. ಅವರು ನೃತ್ಯಕ್ಕಾಗಿ ಮಾಡಿದ ರಚಿಸಿದ ಅಡವುಗಳೆಲ್ಲವೂ ರಾಗದ ಸ್ವರಗಳೊಡನೆ ಸೊಗಸಾಗಿ ಮೇಳೈಸುತ್ತಿದ್ದವು. ಪಾಠದ ವಿಷಯಕ್ಕೆ ಬಂದರೆ ಅವರು ತುಂಬಾ ಕಟ್ಟುನಿಟ್ಟು. ಹೊಡೆಯುವುದಕ್ಕೂ ಹಿಂದು ಮುಂದು ನೋಡುತ್ತಿರಲಿಲ್ಲ. ಎಳೆಯ ಬಾಲಾ ತುಂಬಾ ಹೊತ್ತು ಅಭ್ಯಾಸ ಮಾಡಬೇಕಾಗಿತ್ತು. ಶಿಕ್ಷಣ ತುಂಬಾ ಕಠಿಣವಾಗಿರುತ್ತಿತ್ತು. ಮುಂಜಾನೆಯೇ ಪಾಠ ಪ್ರಾರಂಭವಾಗುತ್ತಿತ್ತು. ಸಂಗೀತ ಕಲಿಕೆಯೂ ಪಾಠದ ಭಾಗವಾಗಿತ್ತು.
ನೃತ್ಯ ಕಲಿಯಲಾರಂಭಿಸಿದ ಮೇಲೆ ನಮ್ಮಜ್ಜಿಯೂ ತುಂಬಾ ಸ್ಟ್ರಿಕ್ಟ್ ಆಗಿಬಿಟ್ಟರು. ನನಗೆ ಒಂದು ನಿಮಿಷ ಕೂರುವುದಕ್ಕೂ ಬಿಡುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತು ಮಲಗಿ ವಿಶ್ರಾಂತಿ ತೆಗೆದುಕೊಳ್ಳುವ ಮಾತೇ ಇರಲಿಲ್ಲ. ವಿದ್ಯಾತುರಾಣಾಂ ನ ಸುಖಂ ನ ನಿದ್ರಾ ಎನ್ನುತ್ತಿದ್ದರು.
ಕಂಡಪ್ಪನ್ ಅವರ ಬೆಳಗಿನ ಪಾಠವಾದ ಮೇಲೆ ಜಯಮ್ಮಾಳ್ ಅವರ ಸಂಗೀತದ ಪಾಠ ಶುರುವಾಗುತ್ತಿತ್ತು. ಅವರು ಅಭಿನಯಕ್ಕೂ ರಾಗದ ಚಲನೆಯಲ್ಲಿನ ಏರಿಳತಗಳಿಗೂ ಇರುವ ನಿಕಟ ಸಂಬಂಧವನ್ನು ಕುರಿತು ಹೇಳಿಕೊಡುತ್ತಿದ್ದರು.
ನಿನ್ನ ತಲೆ ಮತ್ತು ನಿನ್ನ ಇಡೀ ಶರೀರ ಕೇವಲ ತಾಳದೊಂದಿಗೆ ಮಾತ್ರವಲ್ಲ, ರಾಗದ ಸಂಗತಿಗಳು ಮತ್ತು ಗಮಕಗಳೊಂದಿಗೆ ಚಲಿಸಬೇಕು, ಎನ್ನುತ್ತಿದ್ದರು.
ಜಯಮ್ಮಾಳ್ ಬಾಲಾಗೆ ನೃತ್ಯದ ಜೊತೆಗೆ ತಮಿಳು, ತೆಲಗು, ಸಂಸ್ಕೃತ ಇವೆಲ್ಲವನ್ನೂ ಕಲಿಸುವ ವ್ಯವಸ್ಥೆ ಮಾಡಿದ್ದರು. ರಾಧಮ್ಮ ಎಂಬ ಪಂಡಿತೆ ಇವರ ಮನೆಯಲ್ಲೇ ವಾಸವಾಗಿದ್ದರು. ಅವರಿಗೆ ರಾಮಾಯಣ, ಮೊದಲಾದ ಹಲವು ಗ್ರಂಥಗಳು ಬಾಯಿಗೇ ಬರುತ್ತಿತ್ತು. ಅವರು ಬಾಲಾಳಿಗೆ ಇವೆಲ್ಲವನ್ನೂ ಕಲಿಸುವುದರ ಜೊತೆಗೆ ಕೈಯನ್ನು ಬಳಸದೆ ಕೇವಲ ಮುಖವನ್ನಷ್ಟೇ ಬಳಸಿ ಭಾವವನ್ನು ಅಭಿವ್ಯಕ್ತಿಸುವುದು ಹೇಗೆಂಬುದನ್ನೂ ಬಾಲಾಗೆ ಕಲಿಸಿದ್ದರು.
ಧನಮ್ಮಾಳ್, ಜಯಮ್ಮ ಹಾಗೂ ಬಾಲಾ ಇವರೆಲ್ಲಾ ಬೇರೆಯವರಿಂದಲೂ ಕಲಿತಿದ್ದಾರೆ. ಅವರೆಲ್ಲಾ ಒಳ್ಳೆಯದು ಎಲ್ಲೇ ಕಂಡರು ಕಲಿತು ತಮ್ಮ ಪರಂಪರೆಯನ್ನು ಶ್ರೀಮಂತಗೊಳಿಸುತ್ತಿದ್ದರು.
ಬಾಲಾ ಕೂಡ ಹಾಗೆ ಹಲವರಿಂದ ಕಲಿತಿದ್ದರು. ಚಿನ್ನಯ್ಯ ನಾಯ್ಡು ಅವರಿಂದ ಅಭಿನಯವನ್ನು ಕಲಿತಿದ್ದರು. ದೊಡ್ಡವರಾದ ಮೇಲೂ ವೇದಾಂತಂ ಲಕ್ಷ್ಮೀನಾರಾಯಣ ಶಾಸ್ತ್ರಿಯವರಿಂದ ಅಭಿನಯಕ್ಕೆ ಸಂಬಂಧಿಸಿದಂತೆ ಹೊಸ ಹೊಳವುಗಳನ್ನು ಕಲಿತರು. ಶಾಸ್ತ್ರಿಯವರು ಪದಂಗಳ ನಿರೂಪಣೆಗೆ ಹೆಸರಾದವರು. ಪದಂಗೆ ಅಂಟಿಕೊಳ್ಳಲು ಬಾಲಾಳನ್ನು ಪ್ರೇರೇಪಿಸಿದವರೇ ಶಾಸ್ತ್ರಿಗಳು. ಅವರು ಬಾಲಾಳ ತೋಡಿ ಆಲಾಪನೆಯನ್ನು ಕೇಳಿ ತುಂಬಾ ಮೆಚ್ಚಿಕೊಂಡರೂ ನೀನು ಪದಂಗೆ ಅಂಟಿಕೊ. ಅದು ನಿಮ್ಮ ಕುಟುಂಬದ ಆಸ್ತಿ. ನಿಮ್ಮ ಅಮ್ಮನಂಥವರು ಪದಂ ಹಾಡುವಾಗ ನೀನು ಇಡೀ ಜಗತ್ತನ್ನು ನಿನ್ನ ಅಂಗೈಯಲ್ಲಿ ಕುಣಿಸಬಹುದು ಎಂಬ ಸಲಹೆ ನೀಡಿದರು.
ಶಾಸ್ತ್ರಿಯವರು ಬೆಳಗ್ಗಿನ ಜಾವವೇ ಬಾಲಾಳ ಮನೆಗೆ ಬಂದು ಗಂಟಗಟ್ಟಲೇ ಪಾಠ ಹೇಳಿಕೊಡುತ್ತಿದ್ದರು.
ಸಮರ್ಥ ಗುರಗಳಿಂದ ಪಾಠ ಹಾಗೂ ಮನೆಯಲ್ಲಿನ ಪೂರಕ ವಾತಾವರಣ ಇವುಗಳಿಂದ ಬಾಲಾರ ಕಲೆ ಹೆಚ್ಚು ಅರ್ಥಪೂರ್ಣವಾಗಿ ಬೆಳೆಯತೊಡಗಿತು. ಧನಮ್ಮಾಳ್ ಅವರನ್ನು ನೋಡಲು ಬಗೆ ಬಗೆಯ ಸಂಗೀತಗಾರರು ಮನೆಗೆ ಬರುತ್ತಿದ್ದರು. ಜಾವಳಿ ಪ್ರಸ್ತುತಿಗೆ ಖ್ಯಾತರಾಗಿದ್ದ ಧರ್ಮಪುರಿ ಸುಬ್ಬರಾಯರ್, ಕೊಳಲು ವಾದಕ ತಿರುಪ್ಪಾಂಬರಂ ಸ್ವಾಮಿನಾಥ ಪಿಳ್ಳೈ, ನೈನಾ ಪಿಳ್ಳೈ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮುಂತಾದವರು ಬರುತ್ತಿದ್ದರು. ಮಾತಿನ ಜೊತೆಗೆ ಪರಸ್ಪರ ಕಲಿಯುತ್ತಿದ್ದರು. ಉದಾಹರಣೆಗೆ ಅರಿಯಾಕುಡಿಯವರು ಪದಂಗಳನ್ನು ಜಯಮ್ಮಾಳ್ ಅವರಿಂದ ಕಲಿತರು.
ಬಾಲಾ ಅವರ ಅಭಿವ್ಯಕ್ತಿಯಲ್ಲಿ ಸಂಗೀತ ಹಾಗೂ ನೃತ್ಯ ಸೊಗಸಾಗಿ ಹೊಂದಿಕೊಂಡು ಹೋಗುತ್ತಿತ್ತು. ಸೃಜನಶೀಲ ಸಾಧ್ಯತೆಗಳು ಅವರ ಮನಸ್ಸಿಗೆ ದಿಢೀರನೆ ಬಂದು ಬಿಡುತ್ತಿದ್ದವು. ಮನಸ್ಸು ತುಂಬಾ ಜಾಗೃತವಾಗಿತ್ತು.
ಒಮ್ಮೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಮಂಗಳವನ್ನು ಹಾಡಿ ಅಭಿನಯಿಸಲು ಪ್ರಾರಂಭಿಸಿದರು. ಕೆಲವರು ಮುಗಿಯಿತು ಎಂದು ಭಾವಿಸಿ ಹೊರಟರು. ಆದರೆ ಎಲ್ಲರ ನಿರೀಕ್ಷೆಯಂತೆ ಮಂಗಳ ಚುಟುಕಾಗಿ ಮುಗಿಯಲಿಲ್ಲ. ತ್ಯಾಗರಾಜರ ನೌಕಾಚರಿತಂನಿಂದ ಮಾಕುಲ ಮೊನಗು ಇಕಪರ ಮೊಸಗಿನ ನೀಕು ಮಂಗಳಂ, ಶುಭಮಂಗಳಂ ಪ್ರಾರಂಭಿಸಿದರು. ದೇವಸ್ಥಾನದಲ್ಲಿ ಮಂಗಳದ ಸಂದರ್ಭದಲ್ಲಿ ನಡೆಸುವ ಉಪಚಾರಗಳೆಲ್ಲವೂ ನೃತ್ಯದಲ್ಲಿ ಪ್ರಸ್ತುತಗೊಂಡಿವು. ಇಡೀ ಪ್ರಸ್ತುತಿ ಅತ್ಯಂತ ಕಲ್ಪನಾಶೀಲವಾಗಿತ್ತು.
ಅವರ ಅಭಿವ್ಯಕ್ತಿಯ ಸೃಜನಶೀಲತೆಗೆ ಕೃಷ್ಣ ನೀ ಬೇಗನೆ ಬಾರೋ ಇನ್ನೊಂದು ಉದಾಹರಣೆ. ಇವರಿಗೆ ಪುರಂದರದಾಸರ ಕೃತಿಗಳ ಪರಿಚಯವಾದದ್ದು ಅವರ ಮನೆಗೆ ಹೈದರಾಬಾದಿನಿಂದ ಬರುತ್ತಿದ್ದ ಹಯಗ್ರೀವಾಚಾರ್ ಅವರಿಂದ. ಕೃಷ್ಣ ನೀ ಬೇಗನೆ ಬಾರೋ ಕಲಿಸಿದವರು ಅವರೇ. ರಸಿಕ ರಂಜನಿ ಸಭಾದಲ್ಲಿ ಜಯಮ್ಮಾಳ್ ಮಗಳ ನೃತ್ಯ ಕಾರ್ಯಕ್ರಮದಲ್ಲಿ ಅದನ್ನು ಹಾಡಿದರು. ಅದನ್ನು ಕೇಳುತ್ತಾ ಪುಳಕಿತಗೊಂಡ ಬಾಲಾ ತಕ್ಷಣ ಆ ಹಾಡಿಗೆ ಅಲ್ಲೇ ನೃತ್ಯ ಸಂಯೋಜಿಸಿಕೊಂಡು ನರ್ತಿಸಿದರು. ಆಗ ಬಾಲಾಳಿಗಿನ್ನೂ ಹದಿನಾರು ವರುಷ. ಜನ ಅದನ್ನು ತುಂಬಾ ಮೆಚ್ಚಿಕೊಂಡರು. ಅಲ್ಲಿಂದ ಮುಂದಕ್ಕೆ ಅದು ಬಾಲಾ ಅವರ ಕೈಯಲ್ಲಿ ಮತ್ತಷ್ಟು ಸುಧಾರಣೆಗೊಂಡು ಒಂದು ಸೊಗಸಾದ ಕಲಾಕೃತಿಯ ರೂಪ ಪಡೆಯಿತು. ಅವರು ಪ್ರತಿಬಾರಿ ನರ್ತಿಸಿದಾಗಲೂ ಅದು ಪ್ರೇಕ್ಷಕರಿಗೆ ಅದು ಹೊಸದಾಗಿಯೇ ಕಾಣುತ್ತಿತ್ತು. ಪ್ರೇಕ್ಷಕರು ಅದನ್ನು ಮೊದಲ ಬಾರಿ ನೋಡುತ್ತಿದ್ದೇವೆಯೋ ಎನ್ನುವಷ್ಟು ಸಂಭ್ರಮದಿಂದ ಆನಂದಿಸುತ್ತಿದ್ದರು.
ಬಾಲಸರಸ್ವತಿಗೆ ಆರಂಗೇಟ್ರಂ ಆದಾಗ ಅವರಿಗೆ ಎಂಟು ಅಥವಾ ಒಂಬತ್ತು ವರ್ಷವಿರಬೇಕು. ನನಗೆ ಚೆನ್ನಾಗಿ ನೆನಪಿದೆ. ನನ್ನ ಅರಂಗೇಟ್ರಂ ನಡೆದದ್ದು ಅಮ್ಮನಾಕ್ಷಿ ದೇವಾಲಯದಲ್ಲಿ ನೈನಾ ಪಿಳ್ಳೈ ಬಂದಿದ್ದರು. ಧನಮ್ಮಾಳ್ ಅವರ ಮೊಮ್ಮಗಳು ನೃತ್ಯಮಾಡುತ್ತಾಳೆ ಎನ್ನುವ ಸುದ್ಧಿ ಹೇಗೋ ಹರಡಿತ್ತು. ಸಾಕಷ್ಟು ಜನ ಸೇರಿದ್ದರು. ಅಂದು ಸಂಗೀತ ಕ್ಷೇತ್ರದ ಅಧ್ಯಕ್ಷ ನೈನಾ ಪಿಳ್ಳೈ ಬಾಲಾಗೆ ಒಂದು ಶ್ರುತಿಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಿದರು. ಭಾರತದ ಅಧ್ಯಕ್ಷರಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವಾಗ ಬಾಲಾ ಅದನ್ನು ನೆನಪಿಸಿಕೊಂಡರು. ಆ ಕೊಡುಗೆಗೆ ಬಾಲಾ ಅಷ್ಟೊಂದು ಮಹತ್ವ ನೀಡಿದ್ದರು.
ಇದಾದ ನಂತರ ಬಾಲಾರ ಕಾರ್ಯಕ್ರಮವನ್ನು ಜಲತರಂಗ್ ರಮಣಯ್ಯ ಚೆಟ್ಟಿಯಾರ್ ಅವರು ಮದ್ರಾಸಿನಲ್ಲಿ ಆಯೋಜಿಸಿದ್ದರು. ಈ ರೀತಿಯ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುವುದಕ್ಕೆ ಚೆಟ್ಟಿಯಾರ್ ಹೆಸರುವಾಸಿಯಾಗಿದ್ದರು. ಟಿ ಶಂಕರನ್ ಪ್ರಕಾರ ತಮಿಳುನಾಡಿನಲ್ಲಿ ಸಂಗೀತ ಪರಂಪರೆ ಬೆಳೆಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು. ಈ ಕಾರ್ಯಕ್ರಮಕ್ಕೆ ನೈನಾ ಪಿಳ್ಳೈ, ಗೋವಿಂದಸ್ವಾಮಿ ಪಿಳ್ಳೈ, ಪಕ್ಕೀರ ಪಿಳ್ಳೈ, ಮರುಂಗಪುರಿ ಗೋಪಾಲಕೃಷ್ಣ ಅಯ್ಯರ್ ಹಾಗೂ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ದಿಗ್ಗಜರನ್ನೆಲ್ಲಾ ಚೆಟ್ಟಿಯಾರರು ಆಹ್ವಾನಿಸಿದ್ದರು. ಕಾರ್ಯಕ್ರಮ ತುಂಬಾ ಯಶಸ್ವಿಯಾಗಿತ್ತು. ಒಬ್ಬ ಅಸಾಧಾರಣ ಕಲಾವಿದೆ ಉದಯಿಸಿದ್ದಾರೆ ಎಂದು ಇವರೆಲ್ಲರೂ ಮಾತಾಡಿಕೊಂಡರು.
ಬಾಲಸರಸ್ವತಿಯ ಖ್ಯಾತಿ ದಿನೇ ದಿನೇ ಬೆಳೆಯುತ್ತಾ ಹೋಯಿತು. ಹಲವರು ಅವರ ಅಭಿಮಾನಿಗಳಾದರು. ಉದಯಶಂಕರ್ ಕೂಡ ಅವರಲ್ಲೊಬ್ಬರು. ಹೊರದೇಶಗಳಲ್ಲಿ ಭಾರತೀಯ ಕಲೆಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಅವರೊಂದು ತಂಡವನ್ನು ಕಟ್ಟಿಕೊಳ್ಳುತ್ತಿದ್ದರು. ಬಾಲಾ ಹಾಗೂ ಕಂಡಪ್ಪ ಪಿಳ್ಳೈ ಅವರನ್ನು ತಮ್ಮ ತಂಡದ ಸದಸ್ಯರಾಗುವಂತೆ ಉದಯಶಂಕರ್ ಕೇಳಿಕೊಂಡರು. ಉದಯಶಂಕರ್ ಅವರ ನೃತ್ಯ ಬೇರೆ ರೀತಿಯದ್ದು, ಅದು ಸಾಮೂಹಿಕ ನೃತ್ಯ. ಅದಕ್ಕೆ ನಮ್ಮ ನೃತ್ಯ ಹೊಂದಿಕೊಳ್ಳುವುದಿಲ್ಲ. ನಾವು ಹಣ ಮಾಡಬಹುದು, ಆದರೆ ನಮ್ಮ ಕಲೆ ನಾಶವಾಗಿಬಿಡುತ್ತದೆ ಎಂದು ಆ ಸಲಹೆಯನ್ನು ಜಯಮ್ಮ ತಳ್ಳಿಹಾಕಿದರು. ಬಾಲ ಸರಸ್ವತಿಯ ಕಾರ್ಯಕ್ರಮ ಕಲ್ಕತ್ತಾ, ವಾರಣಾಸಿ ಮುಂತಾದೆಡೆಗಳಲ್ಲಿ ನಡೆಯಿತು.
ಆದರೆ ಬಾಲಾ ಪಾಲಿಗೆ ಮುಂದಿನ ದಿನಗಳು ಇಷ್ಟೊಂದು ಹರ್ಷದಾಯಕ ಆಗಿರಲಿಲ್ಲ. ೧೯೩೦ರ ಕೊನೆಯ ಭಾಗ ನಿಜಕ್ಕೂ ಬಾಲಾ ಅವರಿಗೆ ಕಷ್ಟದ ದಿನಗಳಾದವು. ಆಗ ಅದು ಬೇಬಿ ಕಮಲ ನೃತ್ಯ ಕ್ಷೇತ್ರಕ್ಕೆ ಕಾಲಿಟ್ಟ ಸಮಯ. ಎಲ್ಲರ ಬಾಯಲ್ಲೂ ಅವರದೇ ಮಾತು. ಎಲ್ಲೆಡೆಯಲ್ಲೂ ಅವರದೇ ಕಾರ್ಯಕ್ರಮ. ಬಾಲಾ ದಿವ್ಯನಿರ್ಲಕ್ಷ್ಯಕ್ಕೆ ಒಳಗಾದರು. ಅವರ ಅಭಿಮಾನಿಗಳಲ್ಲಿ ಒಬ್ಬರಾದ ಡಾ ರಾಘವನ್ ಬಾಲಾ ಅವರಿಗಾಗಿ ಮ್ಯೂಸಿಕ್ ಅಕಾಡೆಮಿಯಲ್ಲಿ ನೃತ್ಯದ ತರಗತಿಗಳನ್ನು ಪ್ರಾರಂಭಿಸಿದರು. ಅಲ್ಲಿ ಬಾಲ ಪಾಠ ಮಾಡಬಹುದು ಎಂಬುದು ಅವರ ಆಸೆಯಾಗಿತ್ತು.
ಅವರ ಕಷ್ಟದ ದಿನಗಳಲ್ಲಿ ಅವರ ನೆರವಿಗೆ ಬಂದವರು ನೃತ್ಯಪಟು ರಾಂಗೋಪಾಲ್ ಹಾಗೂ ಡಚ್ ಮಹಿಳೆ ಬೆರಿಲ್ ಡಿ ಜೊಯೆಟ್. ಜೊಯೆಟ್‌ಗೆ ನೃತ್ಯದ ಬಗ್ಗೆ ಅಪಾರ ಆಸಕ್ತಿ. ಅವರು ಭಾರತೀಯ ನೃತ್ಯದಲ್ಲಿನ ಮುದ್ರೆಗಳ ಅಧ್ಯಯನದಲ್ಲಿ ನಿರತರಾಗಿದ್ದರು. ಅದಕ್ಕೆಂದೇ ದಕ್ಷಿಣ ಭಾರತಕ್ಕೆ ಬಂದಿದ್ದರು. ಮದ್ರಾಸಿನಲ್ಲಿ ಒಬ್ಬ ನೃತ್ಯವಿಮರ್ಶಕ ಬಾಲಾ ಕುರಿತು ಆನೆಯನ್ನು ನೋಡುವ ಅವಶ್ಯಕತೆಯಿಲ್ಲ ಎಂದು ಆಕೆಗೆ ಹೇಳಿದರು. ಬಾಲಾ ಸ್ವಲ್ಪ ದಪ್ಪವಾಗಿದ್ದಕ್ಕೆ ಈ ವ್ಯಂಗ್ಯ. ಆದರೆ ಯಾವುದೇ ಕಾರಣಕ್ಕೂ ಬಾಲಾರನ್ನು ಭೇಟಿಯಾಗದೇ ಹೋಗಬಾರದು ಎಂದು ರಾಘವನ್ ಆಕೆಗೆ ತಿಳಿಸಿದ್ದರು. ಜೊಯೆಟ್ ಬಾಲ ಅವರನ್ನು ಭೇಟಿ ಮಾಡಿದರು. ನಂತರ ತಮ್ಮ ಗ್ರಂಥದಲ್ಲಿ ಬಾಲಾರ ಭೇಟಿಯನ್ನು ಕುರಿತು ಬಾಲಾ ನಮ್ಮನ್ನು ತುಂಬಾ ಆತ್ಮೀಯವಾಗಿ ಬರಮಾಡಿಕೊಂಡರು. ಒಂದಿಷ್ಟು ದಪ್ಪ ಆಗಿದ್ದರು. ಆದರೆ ಆನೆಯ ಹಾಗೇನು ಇರಲಿಲ್ಲ. ತುಂಬಾ ಘನತೆಯಿಂದ, ಮರ್ಯಾದೆಯಿಂದ ನಡೆದುಕೊಂಡರು. ಹಲವು ವರ್ಷಗಳ ಕಾಲ ಸಾರ್ವಜನಿಕವಾಗಿ ನೃತ್ಯ ಮಾಡಿರಲಿಲ್ಲ. ರುಮಟಿಸಂನಿಂದ ನರಳುತ್ತಿದ್ದರು. ಜೊತೆಗೆ ಹೃದಯದ ಸಮಸ್ಯೆಯೂ ಸೇರಿಕೊಂಡಿತ್ತು. ಅದರಿಂದ ದಪ್ಪವಾಗುವ ಪ್ರವೃತ್ತಿಯಿತ್ತು. ನನ್ನೊಂದಿಗೆ ಮಾತನಾಡುತ್ತಾ ತುಂಬಾ ಸಮಯ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಪಥ್ಯದಿಂದ ಏನು ಲಾಭವಾಗಲಿಲ್ಲ ಎಂದು ಹೇಳಿಕೊಂಡರು. ಯಾರೂ ಅವರ ನೃತ್ಯವನ್ನು ನೋಡಲು ಬಯಸುತ್ತಿರಲಿಲ್ಲ ಎಂದು ಡಿಪ್ರೆಸ್ ಆಗಿದ್ದರು. ಅವರಿಗೆ ಅಂತಹ ವಯಸ್ಸು ಆಗಿರಲಿಲ್ಲ. ಮೂವತ್ತರ ಆಸುಪಾಸು
ಜೊಯೆಟ್‌ಗೆ ಬಾಲಾ ಪ್ರತಿಭಾವಂತೆ ಎನ್ನುವುದರ ಬಗ್ಗೆ ಯಾವುದೇ ಅನುಮಾನವೂ ಇರಲಿಲ್ಲ. ಅವರ ಕಾರ್ಯಕ್ರಮಗಳನ್ನು ಆಯೋಜಿಸಬೇಕೆನ್ನುವ ಆಸೆ ಅವರಲ್ಲಿ ಬಲವಾಯಿತು. ಅವರು ಮತ್ತ್ತೆ ರಾಂಗೋಪಾಲ್ ಜೊತೆಯಲ್ಲಿ ಬಂದು ಸಾರ್ವಜನಿಕ ವೇದಿಕೆಯಲ್ಲಿ ನೃತ್ಯ ಮಾಡಲು ಬಾಲಾರನ್ನು ಕೇಳಿಕೊಂಡರು. ಬಾಲಸರಸ್ವತಿ ಒಪ್ಪಿ ಕಾರ್ಯಕ್ರಮ ನೀಡಿದರು. ಬಾಲಾರ ನೃತ್ಯವನ್ನು ನೋಡಿ ಜೊಯೆಟ್ ಅವರ ಪಕ್ಕಾ ಅಭಿಮಾನಿಯಾಗಿಬಿಟ್ಟರು.
ಬಾಲಸರಸ್ವತಿಗೆ ಅವರ ನೆರವಿನಿಂದ ದೆಹಲಿಯಲ್ಲಿ ಕಾರ್ಯಕ್ರಮ ಸಿಕ್ಕಿತು. ಅಪಾರವಾದ ಮೆಚ್ಚುಗೆಯೂ ದೊರಕಿತು. ಹಲವಾರು ಪ್ರಶಸ್ತಿಗಳು ಬಂದವು. ೧೯೫೫ರಲ್ಲಿ ಸಂಗೀತನಾಟಕ ಅಕಾಡೆಮಿ ಪ್ರಶಸ್ತಿ, ೧೯೫೭ರಲ್ಲಿ ಪದ್ಮಭೂಷಣ ಮತ್ತು ನಂತರ ರಬೀಂದ್ರ ಭಾರತೀಯ ಗೌರವ ಡಾಕ್ಟರೇಟ್ ದೊರಕಿತು. ನಾಟ್ಯರಾಣಿ ಬಾಲಸರಸ್ವತಿ ಭಾರತವನ್ನು ಗೆದ್ದುಕೊಂಡರು. ಹೊರಗಿನ ಜಗತ್ತು ಅವರ ನಿರೀಕ್ಷೆಯಲ್ಲಿ ಇತ್ತು. ಫಿನಿಕ್ಸನಂತೆ ಮತ್ತೆ ಬೂದಿಯಿಂದ ಮೇಲೆದ್ದರು. ಹಿಂದೆ ಟೀಕಿಸಿದವರೆಲ್ಲರೂ ಪಶ್ಚಾತಾಪ ಪಡುವಂತಾಯಿತು.
ಕಪಿಲಾ ವತ್ಸಾಯನ ಆ ಸಮಯದಲ್ಲಿ ಸರ್ಕಾರಕ್ಕೆ ಶೈಕ್ಷಣಿಕ ಸಲಹೆಗಾರರಾಗಿದ್ದರು. ಅವರು ಬಾಲಾರನ್ನು ಜಪಾನಿಗೆ ಕಳಿಸಲು ಪ್ರಯತ್ನಿಸಿದರು. ಆದರೆ ಪ್ರಮುಖ ಸ್ಥಾನದಲ್ಲಿರುವ ಕೆಲವರಿಗೆ ಹರೆಯದವರ‍್ಯಾರನ್ನಾದರೂ ಕಳಿಸಿದರೆ ಒಳ್ಳೆಯದೆನಿಸಿತ್ತು. ಎಲ್ಲರಿಗೂ ತಮಗೆ ಬೇಕಾದ ಕಲಾವಿದರನ್ನು ಪೋಷಿಸುವ ಇರಾದೆಯಿತ್ತು. ಆದರೆ ಬಾಲಸರಸ್ವತಿಯನ್ನು ಕಳಿಸುವಂತೆ ವತ್ಸಾಯನ ಇದರ ಉಸ್ತುವಾರಿ ಹೊತ್ತಿದ್ದ ನೊಬಕೋವ್ ಅವರ ಮನವೊಲಿಸಿದರು. ಟೊಕಿಯೊದಲ್ಲಿ ಬಾಲರನ್ನು ನೊಬಕೋವ್ ಪ್ರೇಕ್ಷಕರಿಗೆ ಪರಿಚಯಿಸಿದರು. ಬಾಲ ಅವರ ನೃತ್ಯ ನೋಡಿ ಪ್ರೇಕ್ಷಕರು ಹುಚ್ಚಾದರು. ಕಾರ್ಯಕ್ರಮ ರದ್ದುಗೊಳಿಸಹೊರಟಿದ್ದ ನೊಬಕೋವ್ ತಲೆತಗ್ಗಿಸಿ ಬಾಲಾರ ಕೈಹಿಡಿದು ದಯವಿಟ್ಟು ಕ್ಷಮಿಸಿ, ನಿಮ್ಮನ್ನು ಕೈಬಿಟ್ಟಿದ್ದರೆ ದೊಡ್ಡ ತಪ್ಪಾಗಿಬಿಡುತ್ತಿತ್ತು ಎಂದು ಕಣ್ಣೀರಿಟ್ಟರು. ನಂತರ ಎಡಿನ್‌ಬರ್ಗ್‌ನಲ್ಲಿ ನೀಡಿದ ಎಂಟು ಸರಣಿ ಕಾರ್ಯಕ್ರಮಗಳು ಒಂದೊಂದೂ ಒಂದು ಮುತ್ತು ಎಂದು ಅಲ್ಲಿನ ಪತ್ರಿಕೆಗಳು ವರ್ಣಿದವು. ವಿಭಿನ್ನ ರಸಗಳಿಗೆ ತಕ್ಕಂತೆ ಬದಲಾಗುತ್ತಿದ್ದ ಅವರ ಮುಖಭಾವ, ಭರತನಾಟ್ಯ ತಿಳಿಯದಿದ್ದ, ಭಾಷೆ ಅರಿಯದಿದ್ದ ಎಲ್ಲರನ್ನೂ ಮುಟ್ಟಿತು ಎಂದು ಬರೆದವು.
ಬಾಲಸರಸ್ವತಿಗೆ ತಾವು ತೊಡಗಿಸಿ ಕೊಂಡ ಕ್ಷೇತ್ರದ ಬಗ್ಗೆ ಒಂದು ಸ್ಪಷ್ಟವಾದ ನಿಲುವು ಇತ್ತು. ಅದರಲ್ಲಿ ಶುದ್ಧಿಯಾಗ ಬೇಕಾದ್ದು ಏನೂ ಇಲ್ಲ. ಅದು ದೈವಿಕ ವಾಗಿದೆ. ಶೃಂಗಾರವೆನ್ನುವುದು ಭಾವನೆಗಳಲೆಲ್ಲಾ ಶ್ರೇಷ್ಠವಾದದು. ದೈವಿಕ ಶಕ್ತಿಯೊಂದರ ಜೊತೆಗೆ ಮಾನವ ಒಂದಾಗುವುದಕ್ಕೆ ಬೇರೆ ಇನ್ಯಾವುದೇ ಭಾವನೆಯ ಮೂಲಕವೂ ಸಾಧ್ಯವಿಲ್ಲವೆಂದು ಅಚಲವಾಗಿ ನಂಬಿದ್ದರು. ಅದು ಅಶ್ಲೀಲವೆಂದು ಯಾರಾದರೂ ಹೇಳಿದರೆ ತುಂಬಾ ಸಿಟ್ಟಾಗುತ್ತಿದ್ದರು. ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಒಬ್ಬ ಹಿರಿಯ ವಿದ್ವಾಂಸರು ಭಕ್ತಿಯ ಶ್ರೇಷ್ಠತೆಯನ್ನು ವರ್ಣಿಸಿ ಶೃಂಗಾರವನ್ನು ಅವಹೇಳನ ಮಾಡಿದರು. ಆಗ ಅಲ್ಲೇ ಇದ್ದ ಬಾಲಾ ತಮಗೂ ಮಾತನಾಡಲು ಅವಕಾಶಬೇಕೆಂದು ಕೇಳಿ ಶೃಂಗಾರವನ್ನು ಅಭಿನಯಿಸಿ, ಇದರಲ್ಲಿ ಆಶ್ಲೀಲತೆಯೇನಿದೆ ಹೇಳಿ ಎಂದು ಬಲವಾದ ಸವಾಲೆಸೆದರು. ಎಂದೂ ತಾವು ನಂಬಿದ ಮೌಲ್ಯಗಳಿಗನುಸಾರವಾಗಿ ಬದುಕಿದರು. ಹಲವು ಕಷ್ಟ ಅವಮಾನಗಳನ್ನೆದುರಿಸಿದರು. ಅದೇನೇ ಇರಲಿ ಪ್ರಪಂಚದ ಅತಿ ಶ್ರೇಷ್ಠ ನರ್ತಕಿ ಅವರು ಎನ್ನುವ ಪದವಿಯನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಅವರಿಗೆ ತಮಗೆ ಸಿಕ್ಕ ಎಲ್ಲಾ ಪ್ರಶಸ್ತಿ ಗಳಿಗಿಂತ ತಾನು ಧನಮ್ಮಾಳ್ ಮರಿಮಗಳು ಎನ್ನುವುದೇ ದೊಡ್ಡ ಪ್ರಶಸ್ತಿ ಎಂಬ ಭಾವನೆಯಿತ್ತು. ಜನ ತನ್ನನ್ನು ಸ್ಮರಿಸುವುದಾದರೆ ಧನಮ್ಮಾಳ್ ಮೊಮ್ಮಗಳು ಎಂದು ಗುರುತಿಸಲಿ ಎನ್ನುತ್ತಿದ್ದರು.
ಬಾಲಸರಸ್ವತಿ ೧೯೮೪ರ ಫೆಬ್ರವರಿ ೯, ರಾತ್ರಿ ೭:೩೦ರ ವೇಳೆಗೆ ಅಸುನೀಗಿದರು.
ಮೇ ೧೩, ೧೯೧೮ರಲ್ಲಿ ಹುಟ್ಟಿದ ಬಾಲಸರಸ್ವತಿಗೆ ೨೦೧೮ ಜನ್ಮ ಶತಮಾನೋತ್ಸವ. ಇಡೀ ಬದುಕನ್ನು ಕಲೆಗಾಗಿ ಮುಡಿಪಾಗಿಟ್ಟ ಆಕೆಯನ್ನು ಗೌರವದಿಂದ ನೆನೆಪಿಸಿ ಕೊಳ್ಳಬೇಕಾದ್ದು ಇಡೀ ಸಮಾಜದ ಕರ್ತವ್ಯ.

Bala

ಬಾಲಸರಸ್ವತಿ ಎಂಬ ಮಹಾನ್ ಪ್ರತಿಭೆ

Bha ra tha means...

Bha representing the emotional intelligence, which is an embracing form of intelligence unlike the intellect which is more of a dissecting kind. The Eastern cultures have always held the emotional intelligence as more significant as it is inclusive in nature. 148 more words

#sadguru

Dance, dance and dance.

All of us have that one thing in our lives that we love.

We might not have done it in a long time, but that love for it wouldn’t have diminished even a bit. 302 more words

My Musings