Tags » Features

The Truth Behind The Senator

A political scandal that dodged the camera’s lens for almost 50 years finally comes under new scrutiny with a new engaging political drama from John Curran ( 791 more words

Featured

An Elective Component to your Curriculum: Promoting Student and Staff Motivation

The element of choice in the curriculum, at least in the UK, is a fairly obscure one. I’ve been involved in only one school in which the students were able to choose a course from a menu, other than the point at which they make decisions about their GCSEs. 304 more words

Learning

ಅವರಿಗೂ ಸ್ವಲ್ಪ ಸ್ಪೇಸ್ ಕೊಡಿ..

ಪ್ರೀತಿ ಹನ್ನೆರಡರ ಬಾಲೆ, ತಂದೆ ತಾಯಿಯರ ಪ್ರೀತಿಯ ಪುತ್ಥಳಿ, ಸೇಫ್ಟಿಗೆಂದು ಅವಳಿಗೂ ಒಂದು ಮೊಬೈಲ್ ಅನ್ನು ಕೊಡಿಸಿದ್ದರು, ಶಾಲೆಗೆ ತೆಗೆದು ಕೊಂಡು ಹೋಗದಿದ್ದರೂ ಮಿಕ್ಕ ಸಮಯಗಳಲ್ಲಿ ಮತ್ತೆಲ್ಲಿಯಾದರೂ ಒಬ್ಬಳೇ ಹೊರಗೆ ಹೋದಾಗ ಎನ್ನುವ ದೃಷ್ಟಿಯಿಂದ ಕೊಡಿಸಿದ್ದು. ಈ ಬಾರಿ ತಿಂಗಳ ಬಿಲ್ ಬಂದಾಗ ತಾಯಿಯ ಹುಬ್ಬೇರಿತು, ಸಾವಿರ ರೂಪಾಯಿ ಬಿಲ್ ಬಂದಿತ್ತು. ಅಷೊಂದು ಯಾರ ಹತ್ತಿರ ಮಾತಾಡ್ತಾಳೆ ಎನ್ನುವ ಪ್ರಶ್ನೆ, ಕೊನೆಗೆ ವಿವರ ನೋಡಿದಾಗ ಅವಳು ಬಳಸಿದ ಇಂಟರ್ ನೆಟ್‍ನಿಂದ ಅಷ್ಟೊಂದು ದೊಡ್ಡ ಬಿಲ್ ಆಗಿತ್ತು. ಅವಳು ಬಳಸಿದ್ದು ಎಷ್ಟು ಹೊತ್ತಿನಲ್ಲಿ ಎನ್ನುವ ವಿವರಗಳೂ ಅಲ್ಲಿತ್ತು.

Features

ಅತ್ತೆಯ ಮನೆಯವರ ಮನ ಗೆಲ್ಲಲು..

‘ನೆರೆ ಮನೆಯ ಸಿರಿದೇವಿ ನೀನಾಗು ಮಗಳೇ ಮನೆಯಾಗೆ ಬೇಧ ಬಗೀ ಬೇಡಾ ತೌರಿಗೆ ಹೆಸರ ತರ ಬೇಡಾ’
ಮಗಳನ್ನು ಮದುವೆ ಮಾಡಿ ತೌರಿನಿಂದ ಕಳಿಸುವ ಮುನ್ನ ಪ್ರತಿಯೊಬ್ಬ ತಂದೆ ತಾಯಿ ಹರಸಿ ಕಳುಹಿಸುತ್ತಿದ್ದ ರೂಢಿ ನಮ್ಮ ಹಿಂದೂ ಸಂಸ್ಕೃತಿಯದು. ಏನೇ ತರಲಿ ಹೆಣ್ಣು ಮದುವೆಯಾಗಿ ಅತ್ತೆಯ ಮನೆಗೆ ಹೋಗಲೇ ಬೇಕು ಅಲ್ಲಿ ಜೀವಿಸಲೇ ಬೇಕು. ಮನೆಯಲ್ಲಿರುವ ಹೆಣ್ಣು ಮಕ್ಕಳಾದರೂ ಸರಿ ಅಥವಾ ಉದ್ಯೋಗದಲ್ಲಿರುವವರಾದರೂ ಸರಿ.

Features

ಅಮ್ಮಾ, ನನ್ನ ಮಾತನ್ನೂ ಸ್ವಲ್ಪ ಕೇಳು..

ಮುನಿಸಿಕೊಂಡು ಕುಳಿತಿದ್ದ ಎಂಟು ವರ್ಷದ ಮೊಮ್ಮಗನಿಗೆ ‘ಯಾಕೋ ಸಿಟ್ಟು ಮಾಡ್ಕೋತೀಯಾ ಅಮ್ಮ ಹೇಳಿದ ಹಾಗೆ ಕೇಳ ಬಾರದಾ, ಅವಳಿಗ್ಯಾಕೆ ಸಿಟ್ಟು ಬರಸ್ತೀಯಾ, ದೊಡ್ಡವರು ಹೇಳಿದ ಮಾತು ಕೇಳ ಬೇಕಲ್ವೇನೋ, ಪಾಪ ನಿಮ್ಮಮ್ಮ ಎಷ್ಟು ಕಷ್ಟ ಪಡ್ತಾಳೆ ನಿನಗೋಸ್ಕರ’ ಎನ್ನುವ ಮಾತನ್ನು ಮುಗಿಸುವ ಮೊದಲೇ ಪಟ ಪಟನೇ ನುಡಿದ, ‘ಈ ದೊಡ್ದವರು ಯಾವಾಗಲೂ ಅಷ್ಟೇ, ಬರಿ ಮಕ್ಕಳಿಗೆ ಸದಾ ಏನಾದ್ರೂ ಆ್ಯಕ್ಟೀವಿಟಿಸ್ ಮಾಡೋಕೆ ಹೇಳ್ತಾರೆ, ನಾವು ಮಾತ್ರಾ ನಮಗಿಷ್ಟ ಬಂದದ್ದು ಏನೂ ಮಾಡಬಾರದು, ಅಮ್ಮ ಏನ್ಮಾಡ್ತಾಳೆ ಯಾವಾಗ್ಲೂ  ಫೇಸ್ ಬುಕ್ ಇಲ್ಲಾ   ಫೋನ್‍ನಲ್ಲಿ ಮಾತಾಡ್ತಾಳೆ ನಮಗೆ ಮಾತ್ರಾ ರೂಲ್ಸ್’ ಅಂತ ಪಟ ಪಟನೇ ಇಂಗ್ಲಿಷ್‍ನಲ್ಲಿ ಗೊಣಗಿದ ಈಗಿನ ಮಕ್ಕಳಿಗೆ ಸುಲಲಿತವಾದ ಕನ್ನಡ ತಾನೇ ಎಲ್ಲಿ ಬರುತ್ತೆ..

Features

ಅಜ್ಜಿಯರ ಅತಿ ಪ್ರೀತಿ ಮೊಮ್ಮಕ್ಕಳನ್ನು ಹಾಳು ಮಾಡುವುದೇ?

ಮೊಮ್ಮಕ್ಕಳಿಗೆ ಅಜ್ಜಿಯರೆಂದರೆ ಬಲು ಪ್ರೀತಿ, ಅಮ್ಮನಾದರೆ ಓದಲು ಹೇಳ್ತಾಳೆ, ಹೋಮ್ ವರ್ಕ್ ಮಾಡಿದೆಯಾ ಎಂದು ಗದರುತ್ತಾಳೆ, ಸಮಯಕ್ಕೆ ಸರಿಯಾಗಿ ಎಲ್ಲಾ ಮಾಡ ಬೇಕೆನ್ನುವ ರೂಲ್ಸ್ ಹೇಳ್ತಾಳೆ, ನೀವೇ ತಿನ್ನ ಬೇಕೆನ್ನುತ್ತಾಳೆ, ಜಂಕ್ ತಿನ್ನ ಬೇಡವೆನ್ನುತ್ತಾಳೆ ಆದರೆ ಅಜ್ಜಿ ಇದ್ದರೆ ಓದೋಕೆ ಹೇಳೋದೇ ಇಲ್ಲ, ಎಷ್ಟು ಬೇಕಾದರೂ ಕೇಕ್ ತಿನ್ನ ಬಹುದು, ಕುರ್ ಕುರೆ ಮೆಲ್ಲ ಬಹುದು, ಅವಳೇ ಊಟ ತಿನ್ನಿಸುತ್ತಾಳೆ ತಿನ್ನಿಸುವಾಗ ಕತೆ ಬೇರೆ ಹೇಳ್ತಾಳೆ

Features

ಮಾವಿಗೆ ಗುರಿ ಇಟ್ಟರೆ ಚಿನ್ನ ಬರುವುದೇ?

ಅದೊಂದು ಮುದ್ದಾದ ಹಳ್ಳಿಯ ಹುಡುಗಿ, ಹಳ್ಳಿಯೆಂದ ಮೇಲೆ ಮಾವಿನ ತೋಪು ಇದ್ದದ್ದೇ , ಹುಳಿ ಹುಳಿ ಎಳೆಯ ಮಾವಿನಕಾಯನ್ನು ತಿನ್ನದ ಹುಡುಗಿಯರೆಲ್ಲಿದ್ದಾರೆ? ಗುರಿಯಿಟ್ಟು ಕಲ್ಲಿನಿಂದ ಮಾವಿನಕಾಯಿ ಹೊಡೆಯುವ ಈ ಹುಡುಗಿ ಎಲ್ಲರಿಗೂ ಪ್ರಿಯ, ಅವಳ ಗುರಿ ಎಂದಿಗೂ ತಪ್ಪದು, ಗೆಳತಿಯರಿಗೆಲ್ಲಾ ಅವಳು ಗುರಿಯಿಟ್ಟು ಬೀಳಿಸಿದ ಮಾವಿನ ಕಾಯಿ ಬಲು ರುಚಿ ಆದರೆ ಅದೇ ಗುರಿಯಿಂದ ಮುಂದೆ ಅವಳು ಕಾಮನ್‍ವೆಲ್ತ್‍ನ ಆರ್ಚೆರಿ ಪಂದ್ಯದಲ್ಲಿ ಚಿನ್ನದ ಪದಕ ಗಳಿಸುವುಳೆಂದು ಯಾರಿಗೆ ಗೊತ್ತಿತ್ತು? ಇಡೀ ದೇಶವನ್ನೇ ಅಚ್ಚರಿಗೀಡು ಮಾಡಿದಳು ಈ ಹಳ್ಳಿಯ ಹುಡುಗಿ ದೀಪಿಕಾ ಕುಮಾರಿ, ತಂದೆ ಆಟೋ ಡ್ರೈವರ್ ಅಂದ ಮೇಲೆ ಬಹಳ ಸಿರಿತನದ ವಂಶವಲ್ಲ. ಎಲೆಯ ಮರೆಯಲ್ಲಿ ಹುದುಗಿದ್ದ ಈ ಪ್ರತಿಭೆ ಹೊರ ಬಂದದ್ದು ನಿಜಕ್ಕೂ ಸಂತೋಷದ ವಿಷಯ, ‘ಬಿದಿರಿನ ಬಿಲ್ಲು ಬಾಣಗಳನ್ನು ಉಪಯೋಗಿಸಿ ಕೊಂಡು ಅವಳು ತರಬೇತಿ ಪಡೆಯುತ್ತಿದ್ದಳು ಅವಳಿಗಾಗಿ ನಾವು ಮನೆಯ ಖರ್ಚುಗಳನ್ನು ಬದಿಗಿರಿಸಲೂ ಬೇಕಾಯಿತೆನ್ನುವುದು’ ನರ್ಸ್ ಕೆಲಸ ಮಾಡುವ ತಾಯಿಯ ಅಭಿಪ್ರಾಯ. ನಮ್ಮ ದೇಶದ ಹಳ್ಳಿಗಳಲ್ಲಿ ಇಂತಹ ಮತ್ತೆಷ್ಟು ಪ್ರತಿಭೆಗಳು ಹುದುಗಿವೆಯೋ?

Features