Tags » Film Festival

ಚಲನಚಿತ್ರ ಸಂಜೆಗೆ ರಂಗಾಗಿದೆ ಬೆಂಗಳೂರು

2016ನೇ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ಸಂಜೆ ಡಾ ಅಂಬೇಡ್ಕರ್ ಭವನದಲ್ಲಿ ಜರುಗಲಿದೆ.

ವೇದಿಕೆಯು ರಂಗಿನ ಲೋಕದಂತೆಯೇ ಸಜ್ಜಾಗಿದೆ. ಕನ್ನಡದ ಮನಸ್ಸಿನಲ್ಲಿ ರಾಗ ಲೋಕವನ್ನು ಸೃಷ್ಟಿಸಿದ ಚಿತ್ರರಂಗದ ಮಹತ್ವದ ಸಾಧಕರು ಇಂದು ಮಾನ್ಯ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Bengaluru

ಡಾ ರಾಜ್ ಜನ್ಮದಿನಾಚರಣೆಯಲ್ಲಿ ಗಣ್ಯರ ಮಾತು

ಸಚಿವರಾದ ಕೆ ಜೆ ಜಾರ್ಜ್, ಕೇಂದ್ರ ಸಚಿವ ಅನಂತಕುಮಾರ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ ರಾ ಗೋವಿಂದು, ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರುಗಳು ಡಾ ರಾಜ್ ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕುರಿತ ಚಿತ್ರ ಸಂಪುಟ ಇಲ್ಲಿದೆ.

Bengaluru

ಸಂಭ್ರಮದಲ್ಲಿ ಭಾಗಿಯಾದ ಡಾ ರಾಜ್ ಕುಮಾರ್ ಪುತ್ರರು

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಡಾ ರಾಜ್ ಕುಮಾರ್ ಜನ್ಮ ದಿನಾಚರಣೆಗೆ ರಾಜ್ ಪುತ್ರರಾದ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಶಿವರಾಜ್ ಕುಮಾರ್ ಜೊತೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಮತ್ತು ಹಿರಿಯ ನಟಿ ಜಯಂತಿಯವರನ್ನು ಚಿತ್ರ ಸಂಪುಟದಲ್ಲಿ ಕಾಣಬಹುದು.

Bengaluru

ಡಾ ರಾಜ್ ಜನ್ಮ ದಿನಾಚರಣೆಯ ಚಿತ್ರ ಸಂಪುಟ

ಡಾ ರಾಜ್ ಕುಮಾರ್ ಅವರ 89ನೇ ಜನ್ಮ ದಿನಾಚರಣೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಸಚಿವರಾದ ಕೆ ಜೆ ಜಾರ್ಜ್, ಕೇಂದ್ರ ಸಚಿವರಾದ ಅನಂತಕುಮಾರ್, ಡಾ ರಾಜ್ ಕುಮಾರ್ ಪುತ್ರರಾದ ರಾಘವೇಂದ್ರ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್, ಬರಗೂರು ರಾಮಚಂದ್ರಪ್ಪ ಅವರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನ ಚಿತ್ರ ಅಕಾಡೆಮಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಚಿತ್ರ ಸಂಪುಟ ಇಲ್ಲಿದೆ.

Bengaluru

ಕಿಕ್ಕಿರಿದ ಕಲಾಕ್ಷೇತ್ರ

ಡಾ|| ರಾಜ್ ಜನ್ಮ ದಿನಾಚರಣೆ ಮುಂದುವರೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಸಚಿವರಾದ ಕೆ ಜೆ ಜಾರ್ಜ್, ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್ ವಿ ರಾಜೇಂದ್ರಸಿಂಗ್ ಬಾಬು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಉಪಸ್ಥಿತರಿದ್ದಾರೆ.

Bengaluru

ಡಾ|| ರಾಜ್ ಸಂಭ್ರಮಕ್ಕೆ ರವೀಂದ್ರ ಕಲಾಕ್ಷೇತ್ರ ಸಜ್ಜು

ರವೀಂದ್ರ ಕಲಾಕ್ಷೇತ್ರಕ್ಕೆ ಇಂದು ವಿಶೇಷ ಮೆರುಗು ಬಂದಿದೆ. ಡಾ|| ರಾಜ್ ಕುಮಾರ್ ಜನ್ಮದಿನಾಚರಣೆಯ ಸಂಭ್ರಮಕ್ಕೆ ವಿಭಿನ್ನವಾಗಿ ಸಿಂಗಾರಗೊಂಡು ನೋಡಿದ ಎಲ್ಲರನ್ನೂ ಆಕರ್ಷಿಸುತ್ತಿದೆ. ಕಲಾಕ್ಷೇತ್ರದ ಒಳ ಹೋಗುತ್ತಲೇ ನಾವು ರಾಜ್ ಲೋಕಕ್ಕೆ ಹೋದ ಭಾವ ಮೂಡುತ್ತದೆ. ಅಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ನೋಡಿ ನಾವು ರಾಜ್ ಲೋಕದಲ್ಲಿ ಕಳೆದು ಹೋಗುತ್ತೇವೆ. ರಾಜ್ ಕುಮಾರ್ ಬುದುಕಿನ ಚಿತ್ರಗಳ ನೆನಪುಗಳನ್ನು ಸಾರುವ ವಿಡಿಯೋ., ಕಲಾಕೃತಿ, ಸಂಗೀತ ಮುದ್ರಿಕೆಗಳನ್ನು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರದರ್ಶಿಸಲಾಗುತ್ತಿದೆ.

ಸಚಿವರಾದ ಕೆ ಜೆ ಜಾರ್ಜ್, ಕೇಂದ್ರ ಸಚಿವರಾದ ಅನಂತಕುಮಾರ್ ಅವರು ಡಾ ರಾಜ್ ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.ಸಚಿವರ ಜೊತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಮತ್ತು ಅತಿಥಿಗಳು ಉಪಸ್ಥಿತರಿದ್ದರು.

Bengaluru

ಡಾ ರಾಜ್ ಜನ್ಮ ದಿನಾಚರಣೆಗೆ ಕ್ಷಣಗಣನೆ

ಡಾ ರಾಜ್ ಕುಮಾರ್ 89ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಹಿರಿಯ ಚಿತ್ರ ನಟಿ ಜಯಂತಿ ಆಗಮಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನ ಚಿತ್ರ ಅಕಾಡೆಮಿ ಡಾ ರಾಜ್ ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ.

Bengaluru