Tags » National Investigation Agency

The Quint | Ajmer Blast : Two, Including Former RSS Leader Given Life Sentence

A special National Investigation Agency (NIA) court on Wednesday sentenced Bhavesh Patel and Devendra Gupta to life in jail in the Ajmer Dargah blast case. 198 more words

Today News

NIA news: The month that was

Newsroom24x7 Desk

NIA files supplementary chargesheet against 6 persons for smuggling and circulation of high quality fake Indian currency notes (FICN)

NIA on January 31, 2017 filed charge sheet (Supplementary) against 6 accused persons for smuggling and circulation of high quality fake Indian currency notes (FICN) in case No. 3,791 more words

Terrorist’s diary may change the course of Uri case

The National Investigation Agency (NIA) is basing its investigations on a “blue diary” recovered from one of the three Lashkar-e-Taiba (LeT) terrorists who were killed while attempting to storm an Army camp in Kupwara on October 6. 340 more words

Author_Shobhan_Mittal

17 ಖಾತೆಗಳ, 38 ಕೋಟಿ ರೂಪಾಯಿ ಮೇಲೆ ಎನ್ಐಎ ಕೆಂಗಣ್ಣು

ನಾಲ್ಕು ಪ್ರಮುಖ ಬ್ಯಾಂಕ್‌ಗಳ 17 ಖಾತೆಗಳಲ್ಲಿನ, 38 ಕೋಟಿ ರೂಪಾಯಿ ಚಲಾವಣೆ ಬಗ್ಗೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೆಂಗಣ್ಣು ಬೀರಿದೆ. ಈ ಹಣ ಉಗ್ರ ಚಟುವಟಿಕೆಗೆ ಬಳಕೆ ಆಗಿರುವ ಬಗ್ಗೆ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ, ಎನ್‌ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಹಿಜ್ಬುಲ್ ಮುಜಾಹಿದ್ದಿನ್ ಮುಖಂಡ ಬುರ್ಹಾನ್ ವಾನಿ ಹತ್ಯೆ ಬಳಿಕ, ಕಾಶ್ಮೀರದಲ್ಲಿ ಅಶಾಂತಿ ನೆಲೆಸಿತ್ತು. ಈ ಅವಧಿಯಲ್ಲಿ 38 ಕೋಟಿ ರೂಪಾಯಿ ಅನುಮಾನಾಸ್ಪದವಾಗಿ ಚಲಾವಣೆ ಆಗಿದೆ. ಇದರ ಬಗ್ಗೆ ಎನ್ಐಎ ವಿಚಾರಣೆ ಆರಂಭಿಸಿದ್ದು, ಉಗ್ರ ಚಟುವಟಿಕೆಗೆ ಹಣ ಬಳಕೆ ಆಗಿರುವುದು ಖಚಿತವಾದರೆ, ಎಫ್‌ಐಆರ್ ದಾಖಲಿಸಲು ತೀರ್ಮಾನಿಸಲಾಗಿದೆ. 

ಅನುಮಾನ ಮೂಡಲು ಕಾರಣಗಳೇನು?

ಜುಲೈ 9ರಿಂದ ಈವರೆಗೆ ಕಾಶ್ಮೀರದಲ್ಲಿ ಸಂಭವಿಸಿರುವ ಹಿಂಸಾಚಾರಕ್ಕೆ 65 ಮಂದಿ ಹತ್ಯೆಯಾಗಿದ್ದಾರೆ. ಗಲಭೆ ಆರಂಭಕ್ಕೂ ಮುನ್ನ 17 ಶಂಕಾಸ್ಪದ ಅಕೌಂಟ್‌ಗಳಿಂದ 38 ಕೋಟಿ ರೂಪಾಯಿ ಚಲಾವಣೆಯಾಗಿತ್ತು.

17ರ ಪೈಕಿ, ಒಂದು ಖಾತೆ, ಕೊಳಾಯಿಗಳ ರಿಪೇರಿ ಕಾರ್ಯ ಮಾಡುವ ವ್ಯಕ್ತಿಯ ಹೆಸರಿನಲ್ಲಿ. ಕಿತ್ತು ತಿನ್ನುವ ಬಡತನದಲ್ಲಿರುವ ಈತನ ಖಾತೆಯಿಂದ, ಕೋಟ್ಯಂತರ ರೂಪಾಯಿ ಚಲಾವಣೆ ಆಗಿರುವುದು ಶಂಕೆಗೆ ಪ್ರಮುಖ ಕಾರಣ.

ಕೆಲವು ವ್ಯಾಪಾರಿಗಳ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಇವುಗಳಿಂದಲೂ ಕೋಟ್ಯಂತರ ರೂಪಾಯಿ ಚಲಾವಣೆ ಮಾಡಲಾಗಿದೆ. ಆದರೆ ಈ ವ್ಯಾಪಾರಿಗಳ ವಾರ್ಷಿಕ ವಹಿವಾಟು ಕೆಲವು ಲಕ್ಷಗಳಾಗಿರುವುದು ಅನುಮಾನ ಮೂಡುವುದಕ್ಕೆ ಕಾರಣವಾಗಿದೆ.

ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ಕಾಶ್ಮೀರದ ಅಶಾಂತಿಗೆ ಈ ಹಣ ಬಳಕೆ ಆಗಿರುವುದು ತಿಳಿದು ಬಂದರೆ, ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು, ಪೂರ್ಣಪ್ರಮಾಣದ ವಿಚಾರಣೆ ಆರಂಭಿಸಲಾಗುವುದು ಎಂದು ಎನ್‌ಐಎ ಮೂಲಗಳು ತಿಳಿಸಿವೆ.