Tags » Need Peace?

Do not be anxious about anything

Do not be anxious about anything, but in every situation, by prayer and petition, with thanksgiving, present your requests to God. And the peace of God, which transcends all understanding, will guard your hearts and your minds in Christ Jesus.

Philippians 4:6-7

Need Peace

he rested on the seventh day from all his work

And on the seventh day God finished his work that he had done, and he rested on the seventh day from all his work that he had done. 8 more words

Bible As Guide

ಮುಸ್ಲಿಮನ ಶಾಂತಿಯ ಕಟ್ಟೆಯೊಡೆಯುತ್ತಿದೆ.!

ಕೊಟ್ಟಮುಡಿ,ಆಝಾದ್ ನಗರ್ ಪ್ರಪಂಚದಲ್ಲಿ ಶಾಂತಿಯಿಂದ ಕೂಡಿದ ಸಹಬಾಳ್ವೆಯನ್ನುಬೋಧಿಸಿದ ಮೊದಲ ಧರ್ಮ ಇಸ್ಲಾಂ ಆಗಿದೆ. ಒಬ್ಬ ಮನುಷ್ಯ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗಿನ ಅವನ ಎಲ್ಲಾ ಚಟುವಟಿಕೆಗಳಿಗೆ ಇಸ್ಲಾಮಿನಲ್ಲಿ ಅದರದ್ದೇ ಆದ ತತ್ವ ಹಾಗೂ ವೀಕ್ಷಣೆಗಳಿವೆ. ಮುಸ್ಲಿಮನು ಸಮೂಹದಲ್ಲಿ ಸಕಲ ರೀತಿಯಲ್ಲೂ ಉತ್ತಮನಾಗಿರಬೇಕಾಗಿಯೇ ಇಂತಹ ತತ್ವÀಗಳನ್ನು ಇಸ್ಲಾಂ ಬೋಧಿಸಿದೆ. ‘ಭೂಮಿಯಲ್ಲಿ ಶಾಂತಿಯಿಂದ ಬಾಳಿರಿ, ಹಾಗೂ ಶಾಂತಿಯನ್ನು ಬೋಧಿಸಿರಿ ಎಂಬ ಇಸ್ಲಾಮಿನ ಬೋಧನೆ ಗಮನಾರ್ಹ’. ಇಸ್ಲಾಮಿನ ಆಶಯ ಆಧರ್ಶಗಳನ್ನು ಪಾಲಿಸಿ ಜೀವಿಸುವ ಮುಸ್ಲಿಮನ ಪಾಲಿಗೆ ಶಾಂತಿಯೆಂಬುದು ಬಲು ಮುಖ್ಯ. ಏಕೆಂದರೆ ನಾವು ಜೀವಿಸುತ್ತಿರುವ ವಾತಾವರಣ ಆಶಾಂತಿಯಿಂದ ಕೂಡಿದೆ. ಇಸ್ಲಾಂ ಹಾಗೂ ಮುಸ್ಲಿಮನ ಮೇಲೆ ಹೇಗಾದರೂ ಮಸಿ ಬಳಿಯಬೇಕೆಂದು ಪಣ ತೊಟ್ಟು ನಿಂತಿರುವ ಸಮೂಹವೊಂದು ಕಾರ್ಯಾಚರಿಸುತ್ತಿದೆ. ಸಾಮಾನ್ಯವಾಗಿ ಮುಸ್ಲಿಮನಿಗೆ ಆವೇಶ ಜಾಸ್ತಿ. ಧಾರ್ಮಿಕ ಭಾವನೆಗಳಿಗೆ ಎಲ್ಲಾದರೂ ಅಲ್ಪ ಧಕ್ಕೆ ಬಂತೆಂದರೆ ಆತ ಸಿಡಿದೇಳುತ್ತಾನೆ. ಈ ಒಂದು ಮನಸ್ಥಿತಿಯನ್ನು ಅರಿತಿರುವ ಕೆಲ ನರಿ ಬುದ್ಧಿಗಳು ಮುಸ್ಲಿಮನ ಭಾವನೆಗಳನ್ನು ಕೆರಳಿಸಿ, ಆತನನ್ನು ಉದ್ರೇಕಿಸಿ ಅದರ ಲಾಭವನ್ನು ಪಡೆಯುವ ಕುತ್ಸಿತ ಪರಿಶ್ರಮಗಳನ್ನು ನಡೆಸುತ್ತಿದ್ದಾರೆ. ಹಲವಾರು ಬಗೆಯ ಜನರು ಜೀವಿಸುವ ವೈವಿಧ್ಯಮಯ ಸಮಾಜದಲ್ಲಿ ಜೀವನ ಸಾಗಿಸುವ ನಾವು ಕೆಲವೊಂದು ಕಡೆ ಸುಮ್ಮನಿರಲೇಬೇಕು. ಯಾವುದಾದರೂ ಕಾರ್ಯ ನಡೆದರೆ ಅದರ ವಿರುದ್ಧ ತಕ್ಷಣ ರೊಚ್ಚಿಗೆದ್ದು ಪ್ರತಿಕ್ರಿಯಿಸುವ ಬದಲು, ಶಾಂತಚಿತ್ತತೆಯಿಂದ ನಾಲ್ಕು ಬಾರಿ ಚಿಂತಿಸಿ ಮುಂದಿನ ಹೆಜ್ಜೆ ಇಡುವ ಮನೋಭಾವ ಬೆಳೆಸಬೇಕಾಗಿದೆ. ಆದರೆ ಸಮಚಿತ್ತತೆಯಿಂದಿರಬೇಕಾದ ನಾವು ತಕ್ಷಣ ಪ್ರತಿಭಟಿಸಿ ಇಲಿಯನ್ನು ಹುಲಿಯಾಗಿಸುತ್ತಿದ್ದೇವೆ. ಕೆಲವೊಂದು ತಿಂಗಳ ಹಿಂದೆ ನಡೆದ ಹಾದಿಯ ಪ್ರಕರಣದಿಂದ ಹಿಡಿದು ನಿನ್ನೆ ಮೊನ್ನೆ ನಡೆದ ಮಲಯಾಳಂನ ಅಡಾರ್ ಲವ್ ಸಿನಿಮಾದ ಹಾಡಿನ ತನಕ ಹಲವಾರು ಪ್ರಕರಣಗಳ ವಿರುದ್ಧ ಸುಖಾಸುಮ್ಮನೆ ಪ್ರತಿಭಟಿಸಿ, ಬಾಲಿಶ ವಿಷಯವನ್ನು ಎಲ್ಲರ ಗಮನ ಸೆಳೆಯುವಂತೆ ಮಾಡಿ, ಆ ವಿವಾದದ ಕಾರಣಕರ್ತರಿಗೆ ಲಾಭ ಮಾಡಿಕೊಟ್ಟಿದ್ದೇವೆ. ಹಾದಿಯ ಪ್ರಕರಣವನ್ನು ನೋಡುವುದಾದರೆ ಅದೇ ಸಮಯದಲ್ಲಿ ನೂರಕ್ಕಿಂತಲೂ ಹೆಚ್ಚು ಜನರು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರು. ಆದರೆ ಅದು ಎಲ್ಲೂ ಸುದ್ದಿಯಾಗಲೇ ಇಲ್ಲ. ಏಕೆಂದರೆ ಆ ಸಮುದಾಯ ಎಲ್ಲವನ್ನೂ ದೊಡ್ಡ ವಿಷಯ ಮಾಡದೆ ನುಂಗಿಕೊಳ್ಳಲು ಕಲಿತಿದೆ. ಆ ಒಂದು ಸಮುದಾಯವನ್ನು ನೋಡಿ ನಾವು ಕಲಿಯಬೇಕಾಗಿದ್ದು ಹಲವಿದೆ. ಇದೇ ರೀತಿ ಮಲಯಾಳಂ ಸಿನಿಮಾದಲ್ಲಿ ಪ್ರವಾದಿ ಬಗೆಗಿನ ಹಾಡು ಬಳಸಲಾಗಿದೆಯೆಂದು ಸಮೂಹ ಮಾಧ್ಯಮದಲ್ಲಿ ಭಾರೀ ಬೊಬ್ಬಿರಿಯಲಾಯಿತು. ಹೀಗೆ ಎಲ್ಲೋ ಒಂದು ಮೂಲೆಯಲ್ಲಿರಬೇಕಾದ ವಿಷಯವನ್ನು ಎಲ್ಲರೂ ತಿಳಿಯುವಂತೆ ಮಾಡಿ ಆ ಸಿನಿಮಾಕ್ಕೆ ಪುಕ್ಕಟೆ ಪ್ರಚಾರ ನೀಡಲಾಯಿತು. ಅದು ನಿರ್ಮಾಪಕರ ಇಚ್ಛೆಯೂ ಆಗಿತ್ತು. ಕೇರಳದಲ್ಲಿನ ಮುಸ್ಲಿಂ ಸಂಘಟನೆಗಳು ಪರೋಕ್ಷ ವಿರೋಧ ವ್ಯಕ್ತಪಡಿಸದಿದ್ದರೂ ಕೆಲವೊಂದು ಮುಸ್ಲಿಂ ನಾಮಧಾರಿ ಪುಂಡರನ್ನು ಕರೆಯಿಸಿ, ಕೆಲವು ಚಾನೆಲ್‍ಗಳು ಚರ್ಚಿಸಿದ್ದು ಟಿ. ಆರ್. ಪಿ ವೃದ್ಧಿಗೋಸ್ಕರವಾಗಿತ್ತು. ಆದರೆ ವಿರೋದಾಭಾಸ ಎಂದರೆ ಅಲ್ಲಿ ಈ ಹಾಡಿನ ಬಗ್ಗೆ ಚರ್ಚಿಸದೆ ಪ್ರವಾದಿ ಮುಹಮ್ಮದ್ (ಸ.ಅ) ಇನ್ನಿತರ ಚರಿತ್ರೆಗಳನ್ನು ತಿರುಚಿ ತಮಗಿಷ್ಟ ಬಂದಂತೆ ಹೇಳಿದರು, ಅದೂ ತಫ್ಸೀರಿನಂತ ಗ್ರಂಥಗಳನ್ನಿಟ್ಟು ಚರ್ಚಿಸಲು ಇವರು ಯಾರು? ಆಲಿಂಗಳೇ? ಮದ್ರಸದ ಬಾಗಿಲು ಕಂಡವರೇ? ಸ್ವಲ್ಪ ಅರಬಿಯ ಜ್ಞಾನವಿದೆಯೆಂದು ಎಲ್ಲವನ್ನೂ ವಿವರಿಸಬಹುದಂದು ತಿಳಿದಿದ್ದರೆ ಅದು ದಡ್ಡತನದ ಪರಮಾಪ್ತಿ. ಇನ್ನು ಕೆಲವು ಯುವಕರು ಸಾಮಾಜಿಕ ಜಾಲತಾನದಲ್ಲಿ ತಾನೂಬ್ಬನೇ ನೈಜ ಮುಸ್ಲಿಂ ಎಂಬಂತೆ ಪ್ರತಿಕ್ರಯಿಸಲು ಶುರುಮಾಡಿದರು. ಯಾರಿಗಾಗಿ ಈ ಪ್ರತಿಕ್ರಿಯೆ ? ಸ್ವಲ್ಪ ತಾಳ್ಮೆಯಿಂದ ಚಿಂತಿಸಿ ಹೆಜ್ಜೆಯಿಡಲು ಈ ಸಮುದಾಯಕ್ಕೆ ಏನು ಕಮ್ಮಿ? ಪ್ರಪಂಚದಲ್ಲಿ ಶರವೇಗದಲ್ಲಿ ಬೆಳೆಯಿತ್ತಿರುವ ದರ್ಮ ಇಸ್ಲಾಂ ಆದ್ದರಿಂದ ಎಲ್ಲರಿಗೂ ಈ ದರ್ಮದ ಮೇಲೆ ಒಂದು ಓರೆಗಣ್ಣು ಇದ್ದೇ ಇದೆ. ಇಂತಹ ಸಂದರ್ಭದಲ್ಲಿ ನಾವೇ ಅವಸರ ಪಟ್ಟು ಇಂತವರಿಗೆ ಅವಕಾಶ ಒದಗಿಸಬೇಕಾ?. ಬುದ್ದಿಯನ್ನು ಉಪಯೋಗಿಸಬೇಕಾದಲ್ಲಿ ಬುದ್ದಿಯನ್ನೇ ಉಪಯೋಗಿಸಬೇಸಬೇಕು ಹೊರತು ದಡ್ಡತನವನ್ನಲ್ಲ. ನಬಿಯವರ ಕುರಿತ ಹಾಡು ಸಿನಿಮಾದಲ್ಲಿ ಬಳಸಿದ್ದು,ಹಾಗೂ ಅದರಲ್ಲಿರುವ ದೃಶ್ಯಗಳು ತಪ್ಪು ಅನ್ನುವುದರಲ್ಲಿ ಎರಡು ಮಾತಿಲ್ಲ,ಆದರೆ ಇಂತಹ ಅನೇಕಾರು ಹಾಡುಗಳು ಹಲವಾರು ಸಿನಿಮಾಗಳಲ್ಲಿ ಬಂದು ಅದರಷ್ಟಕ್ಕೆ ಅದು ಹೋಗಿದೆ. ನಮ್ಮ ವಿರೋದವನ್ನು ವ್ಯಕ್ತಪಡಿಸಲು ಹಲವರು ಮಾರ್ಗಗಳಿರುವಾಗ ದುಡುಕುತನವೇಕೆ?. ಇಸ್ಲಾಮನ್ನು ವಿಕೃತಗೊಳಿಸಲು ಕಾಟುಕುಳಿತಿರುವವರಿಗೆ ನಾವೇ ಸಹಾಯ ಮಾಡಿಕೊಡುತ್ತಿದ್ದೇವೆ,ಇನ್ನೂ ವಿಪರ್ಯಾಸವೆಂದರೆ ಏನೂ ತಿಳಿಯದೆ ಹಾಡಿನ ಲಿರಿಕ್ಸ್ ಮೇಲೆ ಕೇಸು ಹಾಕಿ ಪಾಪ ಹಾಡು ರಚಿಸಿದ ವ್ಯಕ್ತಿಯ ಮೇಲೆ ಕೇಸು ಬರುಂತೆ ಮಾಡಿದ ಹೈದರಾಬಾದಿನವರಿಗೇನನ್ನಬೇಕು?. ಇಲ್ಲಾಗಿರುವ ಅನ್ಯಾಯ ಪ್ರಶ್ನಿಸಲು ಇಲ್ಲಿಯ ಸಂಘಟನೆಗಳಿರಬೇಕಾದರೆ ಅತಿರೇಕ ಮಾಡಬೇಕಾದ ಅಗತ್ಯವಾದರು ಏನು? ಇಲ್ಲಿಯ ಸಂಘಟನೆಗಳು ಮಲಗಿ ಕೂತಿಲ್ಲ,ಬದಲು ಬುದ್ದಿಪೂರ್ವಕ ಹೆಜ್ಜೆಯನ್ನಿಡುವ ಸನ್ನಾಹದಲ್ಲಿದ್ದರು.ಆದರೆ ಎಲ್ಲವನ್ನೂ ಒಂದೇ ನಿಮಿಷಕ್ಕೆ ಅಳಸಿ ಹಾಕಿದರು ಈ ಹೈದರಾಬಾದಿಗರು. ಮುಸ್ಲಿಮನ ಕೆರಳುವಿಕೆಯನ್ನು ಅಸ್ತ್ರವಾಗಿಸಿ ಮಾದ್ಯಮಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದರೆಡೆಯಲ್ಲೂ ಕೆಲವು ಯುವಕರು ಈ ಹಾಡನ್ನು ಉತ್ತಮವಾದ ರೀತಿಯಲ್ಲಿ ಮರು ಸಂಯೋಜಿಸಿ ಈ ಹಾಡಿನ ನೈಜತೆ ಕಾಪಾಡುವ ಕೆಲಸ ಮಾಡಿದ್ದು ಆಶಾದಾಯಕ. ನಬಿಯವರ ಕಾಲದಲ್ಲಿ ಇದಕ್ಕಿಂತ ದೊಡ್ಡ ಅಪಮಾನಗಳಾದಾಗ ತದೇಕ ಚಿತ್ತದಿಂದ ಶಾಂತ ಸ್ವಬಾವದಿಂದ ಅದನ್ನೆಲ್ಲಾ ಎದುರಿಸಿ ನಮಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಇಂತಹ ಪ್ರವಾದಿವರ್ಯರ ಅನುಯಾಯಿಗಳಾದ ನಾವು ಎಲ್ಲ ವಿಷಯವನ್ನು ಸಾತ ಸ್ವಭಾವದಿಂದ ಹಾಗೂ ದೀರ್ಘ ವೀಕ್ಷಣೆಯೊಂದಿಗೆ ಮಾಡಬೇಕು. ಇಲ್ಲವಾದಲ್ಲಿ ಇಂತಹ ಅಪಮಾನಗಳು ಸಹಿಸಬೇಕಾದೀತು. ಕುರಾನ್ ಹೇಳುವಂತೆ ‘ನಿಮಗೆ ಪ್ರವಾದಿಯವರಲ್ಲಿ ಉತ್ತಮ ಮಾರ್ಗದರ್ಶನವಿದೆ’, ಅದು ಪ್ರವಾದಿಯವರು ತಮ್ಮ ಜೀವನದುದ್ದಕ್ಕೂ ತೋರಿಸಿ ಕೊಟ್ಟಿದ್ದಾರೆ. ಯಾವುದೆ ವಿಶಯಗಳಲ್ಲೂ ನಮ್ಮ ಉಲಮಾ ನೇತಾರರು ಯಾವ ನಿಲುವು ಹೋಂದಿದ್ದಾರೆ ಎಂದು ತಿಳಿದ ನಂತರ ನಮ್ಮ ಅಬಿಪ್ರಾಯ ವ್ಯಕ್ತಪಡಿಸಬೇಕು. ಅವರಿಗೆ ಯಾವುದೆ ನಿಲುವಿಲ್ಲದಿದ್ದರೆ ನಾವು ಪ್ರತಿಬಟಿಸಲು ಹೋಗಬಾರದು, ನಾವು ನಮ್ಮ ನೇತಾರರನ್ನು ಹಿಂಬಾಲಿಸಬೇಕೇ ಹೊರತು ಅವಿವೇಕತನವನ್ನಲ್ಲ. ವಿಮರ್ಶಕರು, ಸ್ತ್ರೀ ವಾದಿಗಳು, ಸೆಕ್ಯುಲರಿಸ್ಟ್‍ಗಳು ಅತಿಯಾಗಿರುವ ಈ ಸಂಧರ್ಬದಲ್ಲಿ ವಿವೇಕತನದಿಂದ ಕೂಡಿದ ಚಿಂತನೆಗಳು ನಡುವಳಿಕೆಗಳು ಅತ್ಯಗತ್ಯ. ಹಿಂದಿನ ಕಾಲದ ಹಾಗಲ್ಲ ಈಗಿನ ಪರಿಸ್ಥಿತಿ, ಸೆಕೆಂಡುಗಳಲ್ಲಿ ಕೋಟಿ ಜನರನ್ನ ತಲುಪಬಲ್ಲ ಆಧುನಿಕ ಸಂವಿದಾನವಿರುವ ಈ ಕಾಲದಲ್ಲಿ ನಮ್ಮ ಒಂದೊಂದು ಮಾತೂ ಬಹಳ ಜಾಗರೂಕತೆಯಿಂದ ಕೂಡಿರಬೇಕಾಗಿದೆ. ಮುಸ್ಲಿಮನ ಆವೇಶವನ್ನು ದುರುಪಯೋಗಪಡಿಸಿ ಅದರೆಡೆಯಲ್ಲಿ ಆನಂದ ವೀಕ್ಷಿಸುವ ಗೀಳು ಈಗ ಮುಸ್ಲಿಂ ವಿರೋಧಿಗಳ ಒಂದು ಕುತಂತ್ರವಾಗಿದೆ. ನಾವು ಬದಲಾಗಬೇಕಾಗಿದೆ. ಇತರರಂತೆ ಜಾಣ್ಮೆಯಿಂದ ಜೀವನ ಸಾಗಿಸಿ. ನಮ್ಮ ಕಾರಣದಿಂದ ಈ ಇಸ್ಲಾಂ ದೀನನ್ನು ಇತರರು ಟೀಕಿಸದಂತೆ ನೋಡಿ ಕೊಳ್ಳಬೇಕು. “ಒಂದೋ ವಿವೇಕದಿಂದ ಹಜ್ಜೆಯಿಡು ಇಲ್ಲವಾದಲ್ಲಿ ಸುಮ್ಮನಿರು” ಎಂಬ ಮಾತಿನನ್ವಯ ಜೀವನ ಸಾಗಿಸೋಣ.

-ನಿಝಾರ್ ಕೆ.ಕೆ.

General

be united in the same mind

I appeal to you, brothers, by the name of our Lord Jesus Christ, that all of you agree, and that there be no divisions among you, but that you be united in the same mind and the same judgment.

1 Corinthians 1:10

Need Peace

counselors of peace

Deceit is in the heart of those who devise evil,

But counselors of peace have joy.

Proverbs 12:20

Need Peace

Unity

Make every effort to keep the unity of the Spirit through the bond of peace.

Ephesians 4:3

Need Peace

the cheerful heart has a continual feast

All the days of the oppressed are wretched,

    but the cheerful heart has a continual feast.

Proverbs 15:18

Need Peace