ಇಕ್ಕಿದಾತನು ಉಂಡು , ನಕ್ಕು ಸ್ವರ್ಗಕ್ಕೆ ಹೋದ ಇಕ್ಕದನು ಹೋದ ನರಕಕ್ಕೆ , ಲೋಕದೊಳ್ಳ ಗಿಕ್ಕಲೇಬೇಕು , ಸರ್ವಜ್ಞ.
ಅರ್ಥ : ಯಾವ ವ್ಯಕ್ತಿ ತಾನು ಉಂಡು, ಇತರರಿಗೆ ಉಣಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುವನು,ತಾನೇ ಉಂಡು ಇತರರಿಗೆ ಉಣಿಸದವನು ನರಕಕ್ಕೆ ಹೋಗುವನು.ಅದಕ್ಕೆ ಉಣ್ಣುವವನು ದಾನ ಮಾಡಲೇ ಬೇಕೆಂದ ಸರ್ವಜ್ಞ.